ಏ.16ರಿಂದ ಸರ್ವಧರ್ಮ ಸಮನ್ವಯಕ್ಕೆ ಹೆಸರಾದ ಭವಾನಿ ಮಾತೆ ಜಾತ್ರೆ

ಹೊಸದಿಗಂತ ವರದಿ ಬೀದರ್:‌

ಏಪ್ರಿಲ್ 16 ಹಾಗೂ 17 ರಂದು ಔರಾದ್ ತಾಲ್ಲೂಕಿನ ತುಳಜಾಪೂರದಲ್ಲಿ ಭವಾನಿ ಮಾತೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆ ನಿಮಿತ್ತ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ವಿಶೇಷ ಪೂಜೆ, ಮಹಾಭಿಷೇಕ, ಪ್ರಸಾದ ವಿತರಣೆ, ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಏ 16 ರಂದು ಬೆಳಿಗ್ಗೆ 7ಗಂಟೆಗೆ ಮಹಾಭಿಷೇಕ, ಬೆಳಿಗ್ಗೆ 9ರಿಂದ ಪ್ರಸಾದ ವಿತರಣೆ ಹಾಗೂ ಸಂಜೆ 7ಕ್ಕೆ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ.

ಭವಾನಿ ಮಾತೆ ಜಾತ್ರೆಯು ಸರ್ವಧರ್ಮ ಸಮನ್ವಯಕ್ಕೆ ಹೆಸರಾಗಿದೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧೆಡೆಯಿಂದ ಎಲ್ಲಾ ಧರ್ಮದ ಭಕ್ತರು ಭವಾನಿ ಮಾತೆಗೆ ಪೂಜೆ ಸಲ್ಲಿಸುತ್ತಾರೆ.ಜಾತ್ರೆಗೆ ಇನ್ನು ಕೇವಲ ಮೂರು ದಿನ ಬಾಕಿಯಿರುವ ಕಾರಣದಿಂದಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಮದ ಆರಿಫ್ ಮುಲ್ಲಾ, ಹಿರಿಯ ಮುಖಂಡರಾದ ಅರವಿಂದ ಪಾರಾ, ಸುಭಾಷ್ ಪೊಲೀಸ್ ಪಾಟೀಲ, ತಿಪ್ಪೇಶ ವಲ್ಲಾಪುರೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!