Monday, October 2, 2023

Latest Posts

ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್‌ ಗೆ ಒಲ್ಲೆ ಎಂದ ಗರ್ಲ್‌ಫ್ರೆಂಡ್‌ ತಲೆಯನ್ನು ಬಂಡೆಗೆ ಚಚ್ಚಿದ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬೈನಲ್ಲಿ ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್‌ ಮೇಲೆ ಹಲ್ಲೆ ನಡೆಸಿದ್ದಾನೆ.
ಇದಕ್ಕೆ ಕಾರಣ ಆಕೆ ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್‌ಗೆ ನಿರಾಕರಿಸಿದ್ದು,ಹೌದು, ಮುಂಬೈನಲ್ಲಿ ಯುವಕ ತನ್ನ ಪ್ರೇಯಸಿ ರೊಮ್ಯಾನ್ಸ್‌ಗೆ ನಿರಾಕರಿಸಿದ್ದಕ್ಕೆ ಕತ್ತುಹಿಸುಕಿ, ಆಕೆಯ ತಲೆಯನ್ನು ಬಂಡೆಗೆ ಬಡಿಸಿ ಹಲ್ಲೆ ಮಾಡಿದ್ದಾನೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುಂಬೈ ಉಪನಗರ ಬಾಂದ್ರಾದ ಬಾಂಡ್‌ಸ್ಟಾಂಡ್‌ನಲ್ಲಿ 28 ವರ್ಷದ ಆಕಾಶ್‌ ಮುಖರ್ಜಿ ಹಾಗೂ ಆತನ ಗರ್ಲ್‌ಫ್ರೆಂಡ್‌ ಭೇಟಿಯಾಗಿದ್ದಾರೆ. ಇದೇ ವೇಳೆ, ರೊಮ್ಯಾನ್ಸ್‌ ಮಾಡಲು ಆಕಾಶ್‌ ಮುಂದಾಗಿದ್ದಾನೆ.ಆದರೆ, ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್‌ ಮಾಡಲು ಯುವತಿ ನಿರಾಕರಿಸಿದ್ದಾಳೆ. ಇದರಿಂದ ಆಕಾಶ್‌ ಮುಖರ್ಜಿ ಕುಪಿತಗೊಂಡು ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ರೊಮ್ಯಾನ್ಸ್‌ಗೆ ನಿರಾಕರಿಸಿದ ಕಾರಣ ಆಕಾಶ್‌ ಮೊದಲು ತನ್ನ ಗರ್ಲ್‌ಫ್ರೆಂಡ್‌ ಕತ್ತುಹಿಸುಕಿದ್ದಾನೆ. ಇದಾದ ಬಳಿಕ ಬಂಡೆಗೆ ಆಕೆಯ ತಲೆ ಬಡಿಸಿದ್ದಾನೆ. ಇದಾದ ಬಳಿಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಆಕಾಶ್‌ ಮುಖರ್ಜಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಆಕಾಶ್‌ ಮುಖರ್ಜಿ ಹಾಗೂ ಯುವತಿಯು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಬುಧವಾರ ಇಬ್ಬರೂ ಕಲ್ಯಾಣ ಪ್ರದೇಶದಿಂದ ರೈಲಿನಲ್ಲಿ ತಿರುಗಾಡಿದ್ದಾರೆ. ಗೇಟ್‌ವೇ ಆಫ್‌ ಇಂಡಿಯಾ, ಗಿರಗಾಂವ್‌ ಚೌಪಟ್ಟಿ ಸೇರಿ ಹಲವು ಕಡೆ ಸುತ್ತಾಡಿದ್ದಾರೆ. ಸಾಯಂಕಾಲ ಬಾಂದ್ರಾ ಬಾಂಡ್‌ಸ್ಟಾಂಡ್‌ಗೆ ಬಂದಾಗ ಆಕಾಶ್‌ ಮುಖರ್ಜಿ ರೊಮ್ಯಾನ್ಸ್‌ಗೆ ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!