May 16, 2026
Saturday, May 16, 2026
spot_img

Viral| ಪಂದ್ಯಕ್ಕೆ ಕರೆದಿಲ್ಲ ಎಂದು ಪಿಚ್ ಉಳುಮೆ ಮಾಡಿದ ಭೂಪ: ಫೈನಲ್ ಪಂದ್ಯವೇ ಕ್ಯಾನ್ಸಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿರೋಚಕ ಕ್ಷಣದಲ್ಲಿದ್ದ ಕ್ರಿಕೆಟ್ ಫೈನಲ್ ಪಂದ್ಯ ಏಕಾಏಕಿ ಗೊಂದಲಕ್ಕೆ ತಿರುಗಿದ ಘಟನೆ ಜಳಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಪಂದ್ಯ ಜೋರಾಗಿ ಸಾಗುತ್ತಿದ್ದಾಗ ಯುವಕನೊಬ್ಬ ಟ್ರ್ಯಾಕ್ಟರ್‌ನೊಂದಿಗೆ ಮೈದಾನಕ್ಕೆ ನುಗ್ಗಿ ಪಿಚ್ ಉಳುಮೆ ಮಾಡಿದ ಪರಿಣಾಮ, ಪಂದ್ಯವನ್ನು ರದ್ದು ಮಾಡಬೇಕಾಯಿತು.

ಜಳಗಾಂವ್ ಜಿಲ್ಲೆಯ ಧರಣಗಾಂವ್‌ ನಲ್ಲಿ ನಡೆದ ‘ಜಳಗಾಂವ್ ರೂರಲ್ ಎಂಎಲ್ಎ ಕಪ್’ ಟೂರ್ನಿಯ ಫೈನಲ್ ಪಂದ್ಯ ವೇಳೆ ಈ ಘಟನೆ ನಡೆದಿದೆ. ಟ್ರ್ಯಾಕ್ಟರ್‌ನ್ನು ನೇರವಾಗಿ ಪಿಚ್ ಕಡೆಗೆ ಚಲಾಯಿಸಿದ ಯುವಕ, ನೇಗಿಲಿನ ಮೂಲಕ ಪಿಚ್ ಅನ್ನು ಉಳುಮೆ ಮಾಡಿ ಸಂಪೂರ್ಣ ಹಾನಿಗೊಳಿಸಿದ್ದಾನೆ.

ಇದನ್ನೂ ಓದಿ:

ಆಹ್ವಾನ ನೀಡದಿರುವುದು ಅಥವಾ ಆಟಗಾರರ ಪಟ್ಟಿಯಲ್ಲಿ ಹೆಸರು ಇರದಿರುವುದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವಕ ಈ ರೀತಿಯ ಅತಿರೇಕದ ಕ್ರಮಕ್ಕೆ ಕೈ ಹಾಕಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪಿಚ್ ಸಂಪೂರ್ಣ ಹಾಳಾದ ಹಿನ್ನೆಲೆ ಪಂದ್ಯವನ್ನು ರದ್ದುಗೊಳಿಸಲಾಗಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಯೋಜಕರು ಹಾಗೂ ಆಟಗಾರರು ಈ ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !