October 15, 2026
Thursday, October 15, 2026
spot_img

SUMMER DRINK | ಖರ್ಜೂರ ಮಿಲ್ಕ್ ಶೇಕ್: ಶಕ್ತಿ ಜೊತೆಗೆ ದೇಹಕ್ಕೆ ತಂಪು ಕೊಡುವ ಪಾನೀಯ

ಬೇಸಿಗೆಯಲ್ಲಿ ತಂಪಾದ ಜೊತೆಗೆ ಆರೋಗ್ಯಕರ ಪಾನೀಯ ಬೇಕಾದ್ರೆ ಖರ್ಜೂರ ಮಿಲ್ಕ್ ಶೇಕ್ ಸೂಪರ್ ಆಯ್ಕೆ. ಖರ್ಜೂರದ ನೈಸರ್ಗಿಕ ಸಿಹಿ, ಹಾಲಿನ ಪೌಷ್ಟಿಕತೆ ಸೇರಿ ಈ ಡ್ರಿಂಕ್ ದೇಹಕ್ಕೆ ತಕ್ಷಣ ಎನರ್ಜಿ ಕೊಡುತ್ತದೆ. ಸಕ್ಕರೆ ಕಡಿಮೆ ಬಳಸಿಕೊಂಡು ಆರೋಗ್ಯಕರವಾಗಿ ತಯಾರಿಸಬಹುದಾದ ಸರಳ ರೆಸಿಪಿ ಇದು.

ಬೇಕಾಗುವ ಪದಾರ್ಥಗಳು:

ಖರ್ಜೂರ – 10-12 (ಬೀಜರಹಿತ)
ಹಾಲು – 2 ಕಪ್ (ತಣ್ಣಗಿನದು)
ಬಿಸಿ ಹಾಲು – 1 ಕಪ್
ಏಲಕ್ಕಿ ಪುಡಿ – ¼ ಟೀಸ್ಪೂನ್
ದಾಲ್ಚಿನ್ನಿ ಪುಡಿ – ಚಿಟಿಕೆ
ಜೇನುತುಪ್ಪ / ಸಕ್ಕರೆ – ಬೇಕಾದರೆ
ಐಸ್ ಕ್ಯೂಬ್‌ಗಳು – ಸ್ವಲ್ಪ

ತಯಾರಿಸುವ ವಿಧಾನ:

ಮೊದಲು ಖರ್ಜೂರವನ್ನು 1 ಕಪ್ ಬಿಸಿ ಹಾಲಿನಲ್ಲಿ 15–20 ನಿಮಿಷ ನೆನೆಸಿಡಿ. ನಂತರ ನೆನೆಸಿದ ಖರ್ಜೂರವನ್ನು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ 2 ಕಪ್ ತಣ್ಣಗಿನ ಹಾಲು ಸೇರಿಸಿ. ಏಲಕ್ಕಿ ಪುಡಿ ಅಥವಾ ದಾಲ್ಚಿನ್ನಿ ಪುಡಿ ಹಾಕಿ. ಬೇಕಾದರೆ ಸ್ವಲ್ಪ ಜೇನುತುಪ್ಪ ಸೇರಿಸಿ.

ಈಗ ಮಿಶ್ರಣವನ್ನು ನುಣ್ಣಗೆ, ಕೆನೆಬರಿತವಾಗುವವರೆಗೆ ಬ್ಲೆಂಡ್ ಮಾಡಿ. ಗ್ಲಾಸ್‌ಗೆ ಹಾಕಿ, ಐಸ್ ಕ್ಯೂಬ್‌ಗಳನ್ನು ಸೇರಿಸಿ ತಣ್ಣಗೆ ಸರ್ವ್ ಮಾಡಿ. ಮೇಲೆ ಕತ್ತರಿಸಿದ ಖರ್ಜೂರ ಅಥವಾ ಬಾದಾಮಿ ಹಾಕಿದರೆ ಇನ್ನೂ ರುಚಿ.

Must Read