37 ಕೆ.ಜಿ ಇರೋ ಪತ್ನಿಗೆ ತೂಕ ಇಳಿಸೋಕೆ ಹೇಳಿದ ಭೂಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಹ್ಯ ಸೌಂದರ್ಯ ಅನ್ನೋದಕ್ಕೆ ಲಿಮಿಟ್ ಇಲ್ಲ. ದಪ್ಪ ಇದ್ದವರು ಸಣ್ಣಗಾಗಬೇಕು, ಸಣ್ಣ ಇರುವವರು ದಪ್ಪ ಆಗಬೇಕು, ಸರಿಯಾಗಿ ಇರುವವರು ಸರಿಯಾಗಿರೋಕೆ ಸರ್ಕಸ್ ಮಾಡಬೇಕು…

ಇದೆಲ್ಲಾ ಅವರಿಚ್ಛೆಯೂ ಆಗಿರಬಹುದು ಅಥವಾ ಅವರ ಸಂಗಾತಿಯ ಇಚ್ಛೆಯೂ ಆಗಿರಬಹುದು. ದಪ್ಪಗಿರುವ ಪತ್ನಿ ಅಥವಾ ಪತಿಯನ್ನ ಮೋಟಿವೇಟ್ ಮಾಡಿ ಸಣ್ಣ ಆಗುವಂತೆ ಆರೋಗ್ಯಕ್ಕಾಗಿ ಹೇಳುವ ಎಷ್ಟೋ ಜನರಿದ್ದಾರೆ. ಆದರೆ ಇಲ್ಲೊಂದು ಉಲ್ಟಾ ಕೇಸ್ ದಾಖಲಾಗಿದೆ.

37 ಕೆಜಿ ಇರುವ ಪತ್ನಿಯನ್ನು ನಿನ್ನ ಕೆನ್ನೆ ದಪ್ಪ ಇದೆ, ಕೆನ್ನೆ ಹೋಗಬೇಕು ಎಂದು ಗಂಡ ಚಿತ್ರಹಿಂಸೆ ಕೊಟ್ಟು ಸಣ್ಣ ಆಗು ಎಂದು ಪೀಡಿಸಿದ್ದಾನೆ. ಆತನ ಕಾಟಕ್ಕೆ ಆಕ ಬರೋಬ್ಬರಿ 17 ಕೆ.ಜಿ ತೂಕ ಇಳಿಸಿದ್ದು, ಮೈಯಲ್ಲಿ ಒಂದು ಹಿಡಿ ಮಾಂಸವೂ ಇಲ್ಲದವಳಂತೆ ಕಾಣುತ್ತಿದ್ದಾಳೆ.

ನೈಋತ್ಯ ರಷ್ಯಾದ ಬೆಲ್ಗೊರೊಡ್ ನಿವಾಸ ಯಾನಾ ಬೊಬ್ರೊವಾ ಅತಿಯಾಗಿ ಸಣ್ಣ ಆಗಿದ್ದಾರೆ. ನಿಯಮಿತ ಆಹಾರ ಹಾಗೂ ವರ್ಕೌಟ್ ಮಾಡುತ್ತಾ ಅತಿಯಾಗಿ ಸಣ್ಣ ಆಗಿದ್ದಾರೆ, ಅವರು ಈ ರೀತಿ ಸಣ್ಣ ಆಗುತ್ತಿದ್ದರೂ ಪತಿ ಒಂದು ಮಾತೂ ಹೇಳಿಲ್ಲ.

ಅನಾರೋಗ್ಯದಿಂದ ಆಕೆಯ ಕೆಲಸವೂ ಹೋಗಿತ್ತು. ಇದರ ಜೊತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಷ್ಟೆಲ್ಲಾ ಮಾಡಿಸಿದ ಗಂಡ ಆಕೆಯನ್ನು ಬಿಟ್ಟು ಓಡಿಹೋಗಿದ್ದಾನೆ. ಇಷ್ಟು ತೆಳ್ಳವಾದ ದೇಹ ಇಷ್ಟ ಇಲ್ಲ ಎಂದು ಹೇಳಿ ಉಂಗುರವನ್ನು ಕೊಟ್ಟು ಆತ ಓಡಿಹೋಗಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಯಾನಾ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ತುಂಬಾನೇ ಹದಗೆಟ್ಟಿದೆ.

ಪತಿಯೇ ಆಗಲಿ, ನಿಮ್ಮನ್ನು ಇದ್ದಂತೆ ಒಪ್ಪಲು ಸಾಧ್ಯವಿಲ್ಲ ಎಂದರೆ ಅವರನ್ನು ನೀವು ಎಂದಿಗೂ ತೃಪ್ತಿಪಡಿಸಲು ಸಾಧ್ಯವಿಲ್ಲ. ದೇಹ ನೋಡಿ ಪ್ರೀತಿಸುವುದು ಪ್ರೀತಿಯೇ ಹೌದಾ? ಆಲೋಚಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!