GOOD FOOD | ಮಕ್ಕಳಿಗೆ ಸಕ್ಕರೆ ಯಾಕೆ? ಸಿಹಿಗೆ ಕೊಡಿ ಒಣದ್ರಾಕ್ಷಿ ಜಾಮ್

ಮಕ್ಕಳಿಗೆ ಎರಡು ವರ್ಷದವರೆಗೆ ಸಕ್ಕರೆಯ ಅಭ್ಯಾಸ ಮಾಡಿಸಬೇಡಿ, ಒಂದು ವರ್ಷದವರೆಗೆ ಉಪ್ಪು ಹಾಗೂ ಎರಡು ವರ್ಷದ ವರೆಗೆ ಮಕ್ಕಳಿಗೆ ಸಕ್ಕರೆ ಉತ್ತಮವಲ್ಲ. ಇದು ಸಾಕಷ್ಟು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

ಮಕ್ಕಳಿಗೆ ಸಕ್ಕರೆ ಬದಲು ಒಣದ್ರಾಕ್ಷಿ ಹಾಗೂ ಖರ್ಜೂರ ನೀಡಬಹುದು. ಒಣದ್ರಾಕ್ಷಿಯ ಜಾಮ್ ಮಾಡಿಟ್ಟುಕೊಂಡು ಹಣ್ಣು, ತರಕಾರಿ ಯಾವುದರ ಜೊತೆಗಾದರೂ ನೀಡಬಹುದು.

ಎರಡು ಗಂಟೆವರೆಗೆ ದ್ರಾಕ್ಷಿಯನ್ನು ನೆನೆಸಿ ಇಡಿ. ನಂತರ ಇದಕ್ಕೆ ಶುದ್ಧ ನೀರು ಹಾಕಿ ಬೇಯಿಸಿ, ಚೆನ್ನಾಗಿ ಮೆತ್ತಗೆ ಆಗುವವರೆಗೂ ಬೇಯಿಸಿ ನಂತರ ತಣ್ಣಗಾದ ಮೇಲೆ ಮಿಕ್ಸಿ ಮಾಡಿ ಎತ್ತಿಡಿ, ಫ್ರಿಡ್ಜ್‌ನಲ್ಲಿ ಎರಡು ವಾರ ಹಾಗೂ ಫ್ರೀಜರ್‌ನಲ್ಲಿ ಆರು ತಿಂಗಳು ಇದನ್ನು ಇಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!