INSPIRING | ಮಗನ ಜೊತೆ ಎಸ್‌ಎಲ್‌ಎಲ್‌ಸಿ ಪರೀಕ್ಷೆ ಬರೆದ ತಾಯಿ, ಇಬ್ರೂ ಮನೇಲಿ ಕಂಬೈನ್ಡ್‌ ಸ್ಟಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಓದುವ ಹಂಬಲ ಇರುವವರಿಗೆ ವಯಸ್ಸು ಸಂಖ್ಯೆ ಮಾತ್ರ, ಇದನ್ನು ಸಾಕಷ್ಟು ಮಂದಿ ನಿರೂಪಿಸಿದ್ದಾರೆ. ಇವರ ಸಾಲಿಗೆ 32  ವರ್ಷದ ಗಂಗಮ್ಮ ಕೂಡ ಸೇರಿಕೊಂಡಿದ್ದಾರೆ.

ಹೌದು, ಯಾದಗಿರಿಯ ಶಹಾಪೂರ ತಾಲೂಕಿನ ಸಗರ ಗ್ರಾಮದ ಗಂಗಮ್ಮ ಹಾಗೂ ಮಗ ಮಲ್ಲಿಕಾರ್ಜುನ ಇಂದು ಒಟ್ಟಿಗೇ ಪರೀಕ್ಷೆ ಬರೆಯುತ್ತಿದ್ದಾರೆ.

ಮನೆಯಲ್ಲಿ ಮಗನ ಜೊತೆ ಕೂತು ಗಂಗಮ್ಮ ಕಂಬೈನ್ಡ್‌ ಸ್ಟಡಿ ಮಾಡಿದ್ದು, ಇಬ್ಬರೂ ಒಂದೇ ಸೆಂಟರ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಮಗನ ಜೊತೆ ನಾನೂ ಎಕ್ಸಾಂ ಬರೀತಿದ್ದೀನಿ ಅನ್ನೋಕೆ ಬೇಸರ ಇಲ್ಲ, ಖುಷಿ ಈಗಲಾದರೂ ನಾನು ಪರೀಕ್ಷೆ ಬರೆಯುತ್ತಿದ್ದೇನೆ ಎಂದು ಗಂಗಮ್ಮ ಮುಗ್ಧ ನಗೆ ಬೀರಿದ್ದಾರೆ.

ಈ ತಾಯಂದಿರು ಎಷ್ಟೋ ತಾಯಂದಿರಿಗೆ ಮಾದರಿಯಾಗಲಿ, ವಯಸ್ಸಿನ ಹಂಗು ತೊರೆದು ಓದುವ ಹಂಬಲ ಎಲ್ಲರಲ್ಲೂ ಮೂಡಲಿ, ಬೇಸಿಕ್‌ ಓದು ಬರಹ ಎಲ್ಲರಿಗೂ ಬರುವಂತಾಗಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!