ಪ್ರಧಾನಿ ಮೋದಿಗೆ ಭೂತಾನ್‌ನ ‘ಅತ್ಯುನ್ನತ ನಾಗರೀಕ ಪ್ರಶಸ್ತಿ’ ಪ್ರದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್’ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೊ’ ಪ್ರದಾನ ಮಾಡಲಾಯಿತು.

ಪಿಎಂ ಮೋದಿ ಅವರು ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಭೂತಾನ್‌ನ ರಾಜ ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್‌ನ ಸರ್ವಶ್ರೇಷ್ಠ ನಾಗರೀಕ ಪುರಸ್ಕಾರವಾದ ಆರ್ಡರ್‌ ಆಫ್‌ ಡ್ರುಕ್ ಗ್ಯಾಲ್ಪೋ ಪ್ರದಾನ ಮಾಡಿದರು.

ಪ್ರಶಸ್ತಿ ಸ್ಥಾಪಿತವಾದ ಪ್ರಾಶಸ್ತ್ಯದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆಗಾಗಿ ನೀಡಲಾಗುತ್ತಿತ್ತು. ಭೂತಾನ್‌ನ ಸರ್ವಶ್ರೇಷ್ಠ ಪ್ರಜೆಗೆ ಈ ಗೌರವವನ್ನು ನೀಡಲಾಗುತ್ತದೆ. ಇದು ಭೂತಾನ್‌ನ ಎಲ್ಲಾ ಆರ್ಡರ್‌ಗಳು, ಗೌರವಗಳು ಹಾಗೂ ಪದಕಗಳಿಂದ ಉಚ್ಛ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿಯವರೆಗೂ ಈ ಪ್ರಶಸ್ತಿಯನ್ನು ಕೇವಲ ನಾಲ್ಕು ಗಣ್ಯ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥ ಪ್ರಧಾನಿ ಮೋದಿ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಗೌರವವನ್ನು ರಾಯಲ್‌ ಕ್ವೀನ್‌ ಅವರ ಅಜ್ಜಿ ಆಶಿ ಕೆಸಾಂಗ್ ಚೋಡೆನ್ ವಾಂಗ್‌ಚುಕ್ ಅವರಿಗೆ 208ರಲ್ಲಿ ನೀಡಲಾಗಿತ್ತು. ಆ ಬಳಿಕ, ಜೆ ತ್ರಿಜೂರ್ ಟೆಂಜಿನ್ ಡೆಂಡಪ್ (68 ನೇ ಭೂತಾನ್ ನ ಜೆ ಖೆನ್ಪೋ) ಅವರಿಗೂ ಅದೇ ವರ್ಷದಲ್ಲಿ ನೀಡಲಾಗಿತ್ತು. 2018 ರಲ್ಲಿ ಅವರ ಜೆ ಖೆನ್ಪೋ ಟ್ರುಲ್ಕು ನ್ಗಾವಾಂಗ್ ಜಿಗ್ಮೆ ಚೋಡ್ರಾ ಅವರಿಗೆ ನೀಡಲಾಗಿತ್ತು. ಜೆ ಖೆನ್ಪೋ ಎನ್ನುವುದು ಭೂತಾನ್‌ನ ಕೇಂದ್ರ ಸಂನ್ಯಾಸಿಗಳ ಮುಖ್ಯ ಮಠಾಧೀಶರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!