Friday, December 8, 2023

Latest Posts

ಝೆಲೆನ್ಸ್ಕಿಗೆ ಬಿಡೆನ್‌ನ ಬೆಂಬಲ, ಮಿಲಿಟರಿ ನೆರವು ಖಾತ್ರಿಪಡಿಸಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುಎಸ್ ಅಧ್ಯಕ್ಷ ಜೋ ಬಿಡನ್ ಉಕ್ರೇನ್‌ಗೆ ಹೆಚ್ಚಿನ ಮಿಲಿಟರಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಶ್ವೇತಭವನದ ಓವಲ್ ಕಚೇರಿಯಲ್ಲಿ ಭೇಟಿಯಾಗಿ, ರಷ್ಯಾದ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಲು ನೆರವು ನೀಡುವುದಾಗಿ ಘೋಷಿಸಿದರು.

ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್‌ಗೆ ಅಮೆರಿಕ ಬೆಂಬಲ ನೀಡುತ್ತಿದೆ. ಶಸ್ತ್ರಾಸ್ತ್ರ ಮತ್ತು ವಾಯು ರಕ್ಷಣೆಗಾಗಿ 325 ಮಿಲಿಯನ್ ಡಾಲರ್ ಮಿಲಿಟರಿ ಪ್ಯಾಕೇಜ್ ನೀಡಿದ್ದಕ್ಕಾಗಿ ಝೆಲೆನ್ಸ್ಕಿ ಬಿಡೆನ್‌ಗೆ ಧನ್ಯವಾದ ತಿಳಿಸಿದರು. ಯುದ್ಧದ ಉದ್ವಿಗ್ನತೆಯ ಮಧ್ಯೆ ಉಕ್ರೇನ್‌ನಿಂದ ಧಾನ್ಯ ರಫ್ತುಗಳನ್ನು ವಿಸ್ತರಿಸಲು ಬಿಡೆನ್ ಒಪ್ಪಿಕೊಂಡಿರುವುದಾಗಿ ಝೆಲೆನ್ಸ್ಕಿ ತಿಳಿಸಿದರು.

ವಾಷಿಂಗ್ಟನ್ ಎರಡನೇ ರೇಥಿಯಾನ್-ನಿರ್ಮಿತ ಹಾಕ್ ವಾಯು ರಕ್ಷಣಾ ಬ್ಯಾಟರಿ ಮತ್ತು ಸಂಬಂಧಿತ ಸಾಧನಗಳನ್ನು ಉಕ್ರೇನ್‌ಗೆ ಕಳುಹಿಸಲಿದೆ. ಈ ಕುರಿತು ಝಲೆನ್ಸ್ಕಿ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಇತರ ಹಿರಿಯ ಪೆಂಟಗನ್ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!