ಅಮೆರಿಕದ ಗಡಿಯಲ್ಲಿರುವ ವೆನಿಜುವೆಲಾ ನಾಗರಿಕರನ್ನು ಹೊರ ಹಾಕುವ ನಿರ್ಣಯ ಅಂಗೀಕರಿಸಿದ ಬಿಡೆನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌

ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಗಡಿಯಲ್ಲಿ ಆಶ್ರಯ ಪಡೆದಿರುವ 24 ಸಾವಿರಕ್ಕೂ ಹೆಚ್ಚಿನ ವೆನಿಜುವೆಲಾ ನಿರಾಶ್ರಿತರನ್ನು ದೇಶದಿಂದ ಹೊರಹಾಕುವ ನಿರ್ಣಯವೊಂದನ್ನು ಅದ್ಯಕ್ಷ ಜೋ ಬಿಡೆನ್‌ ಅಂಗೀಕರಿಸಿದ್ದಾರೆ.

ಈ ನಿರ್ಣಯದ ಪ್ರಕಾರ ಅಕ್ರಮವಾಗಿ ಪನಾಮಾ ಮತ್ತು ಮೆಕ್ಸಿಕೋ ಮೂಲಕ ಅಮೆರಿಕವನ್ನು ಪ್ರವೇಶಿಸುವ ವೆನುಜುವೆಲಾದ ನಾಗರೀಕರನ್ನು ಅಮೆರಿಕವು ಸಂಪೂರ್ಣವಾಗಿ ಹೊರಹಾಕಲಿದೆ. ಆದರೆ ನೆರೆಯ ರಾಷ್ಟ್ರ ಮೆಕ್ಸಿಕೋವು ಮೆಕ್ಸಿಕೋಗೆ ಹೊರಹಾಕುವ ಪ್ರತಿ ವೆನಿಜುವೆಲನ್‌ ನಾಗರಿಕರಿಗೆ ಬದಲಾಗಿ ಅಮೆರಿಕವು ಮಾನವೀಯತೆಯ ಪೆರೋಲ್‌ ಆಧಾರದಲ್ಲಿ ಒಬ್ಬ ವೆನಿಜುವೆಲನ್‌ ನಾಗರಿಕನನ್ನು ಸ್ವೀಕರಿಸಬೇಕು ಎಂದು ಒತ್ತಾಯಿಸಿದೆ.

ಬಿಡೆನ್‌ ಅವರ ಈ ನಿರ್ಧಾರವು ಶೀರ್ಷಿಕೆ 42 ಎಂದು ಕರೆಯಲ್ಪಡುವ ಟ್ರಂಪ್‌ ನಿಯಮವನ್ನು ಹೋಲುತ್ತದೆ ಎಂದು ಕೆಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡೆನ್ ಅವರು ನವೆಂಬರ್ 8 ರಂದು ಮಧ್ಯಂತರ ಚುನಾವಣೆ ನಿಗದಿಯಾಗುತ್ತಿದ್ದಂತೆಯೇ ಚುನಾವಣೆಗೆ ಮುಂಚಿತವಾಗಿ ಬಿಕ್ಕಟ್ಟಿನಿಂದ ಬಳಲುತ್ತಿರುವ ವೆನೆಜುವೆಲಾದ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸುವ ನೀತಿಯನ್ನು ಜಾರಿಗೆ ತಂದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!