ಬಿಗ್ ಬ್ಯಾಷ್ ಲೀಗ್‌: ಕೇವಲ 15 ರನ್‌ಗಳಿಗೆ ಆಲೌಟ್ ಆದ ಸಿಡ್ನಿ ಥಂಡರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬ್ಯಾಷ್ ಲೀಗ್‌ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಸಿಡ್ನಿ ಥಂಡರ್ ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ 124 ರನ್‌ ಹೀನಾಯ ಸೋಲು ಕಂಡಿದೆ. ಇದು ಟಿ20 ಕ್ರಿಕೆಟ್​ ನಲ್ಲಿ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಕೇವಲ 35 ಎಸೆತಗಳನ್ನು ಎದುರಿಸಿದ ಸಿಡ್ನಿ ಥಂಡರ್ ತಂಡ ಅಲೆಕ್ಸ್ ಹೇಲ್ಸ್, ದಕ್ಷಿಣ ಆಫ್ರಿಕಾದ ಹಾರ್ಡ್ ಹಿಟ್ಟರ್​ ರಿಲೆ ರುಸೊ ಅವರಂತಹ ಸ್ಟಾರ್​ ಬ್ಯಾಟ್ಸ್​ಮನ್​ ಗಳಿದ್ದರೂ ಸೋಲಿಗೆ ತುತ್ತಾಗಿದೆ.
ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 139 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್​ನ ಬ್ಯಾಟರ್​ಗಳು ಒಬ್ಬರ ಮೇಲೆ ಒಬ್ಬರಂತೆ ಪರೇಡ್ ನಡೆಸಿದರು. ಕೇವಲ 5.5 ಓವರ್​ಗಳಲ್ಲಿ 15 ರನ್​ಗಳಿಗೆ ಸರ್ವಪತನ ಕಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!