BIG BOSS | ಮನೆ ಮಂದಿಗೆ ಸರ್​ಪ್ರೈಸ್​​ ಕೊಟ್ಟ ಬಿಗ್​ ಬಾಸ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಿಮ ವಾರದಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಸರ್ಪ್ರೈಸ್ ನೀಡುತ್ತಿದ್ದಾರೆ. ಅಂತೆಯೇ, ಇದೀಗ ಮನೆಯ ಸದಸ್ಯರು ತಮ್ಮಾಸೆಯಂತೆ ಕೇಳಿಕೊಂಡ ಅವರು ಕೋರಿಕೊಂಡಿರುವುದನ್ನು ನೀಡುತ್ತಿದ್ದಾರೆ.

ರ್ಧಿಗಳು ಕೇಳಿದ್ದನ್ನು ಬಿಗ್​ ಬಾಸ್ ತಥಾಸ್ತು ಅಂತಿದ್ದಾರೆ. ಅವರ ಆಸೆಗಳೇನು ಈಡೇರಿಸುತ್ತಿದ್ದಾರೆ. ಅದರಂತೆಯೇ ಡ್ರೋನ್​ ಪ್ರತಾಪ್​ ಬಿಗ್​ ಬಾಸ್​ ಬಳಿ ಡ್ರೋನ್​ ಕೇಳಿದ್ದು, ಮನೆಗೆ ಡ್ರೋನ್​ ಆಗಮನವಾಗಿದೆ. ಇದರಿಂದ ಪ್ರತಾಪ್​ ಖುಷಿಯಾಗಿದ್ದಾರೆ.

ತುಕಾಲಿ ಸಂತೋಷ್ ರಾಜನಂತೆ ಬದುಕುವಂತೆ ಕೇಳಿಕೊಂಡರು. ಇದೇ ಸಂತಸದಲ್ಲಿ ತುಕಾಲಿ ಕೆಂಪು ಕೋಟು, ಪ್ಯಾಂಟ್​ ಧರಿಸಿಕೊಂಡು ​​ರಾಜನಂತೆ ವರ್ತಿಸಿದ್ದಾರೆ. ಈ ವೇಳೆ ತಲೆದಿಂಬು ತೆಗೆದುಕೊಂಡು ಬೀಸಬೇಕು ಎಂದು ಕಾರ್ತಿಕ್​ ಬಳಿ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್​ ಅವರು ಹೇಳಿದಂತೆ ಮಾಡಿದ್ದಾರೆ.

ಅತ್ತ ವಿನಯ್ ಮತ್ತು ಸಂಗೀತಾ ಕೂಡ ರಾಜನನ್ನು ನೋಡಿಕೊಂಡರು. ರಾಜಾ ತುಕಲಿಗೆ ಹಣ್ಣುಗಳನ್ನು ತಿನ್ನಿಸುವ ಜವಾಬ್ದಾರಿಯನ್ನು ವಿನಯ್ ವಹಿಸಿಕೊಂಡರು. ಕಾರ್ತಿಕ್ ರಾಣಿಯಂತೆ ಬದಲಾಗಿದ್ದು ಈಗ ಸೀರೆ ಉಟ್ಟಿದ್ದಾರೆ. ಈ ವೇಳೆ ತುಕಾಲಿ ಕೂಡ ಕೆನ್ನೆಗೆ ಮುತ್ತಿಟ್ಟರು. ಒಂದು ನಿಮಿಷ ಅಂದರೂ ತಡಮಾಡದಡ ಕಿಸ್​ ಕೊಟ್ಟಿದ್ದಾರೆ. ಈ ವೇಳೆ ಉಳಿದ ಸ್ಪರ್ಧಿಗಳು ನಕ್ಕು ನಕ್ಕು ಸುಸ್ತಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!