REPUBLIC DAY | ಹೇಗಿರಲಿದೆ ಈ ಬಾರಿ ಗಣರಾಜ್ಯೋತ್ಸವ ಸಂಭ್ರಮ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಾದ್ಯಂತ 75 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಪುಟಾಣಿ ಶಾಲಾ ಮಕ್ಕಳು ಕೇಸರಿ ಬಿಳಿ ಹಸಿರು ಟೇಪು ಕಟ್ಟಿಕೊಂಡು, ಕೈಯಲ್ಲೊಂದು ಬಾವುಟ ಇಟ್ಟುಕೊಂಡು ಶಾಲೆಯತ್ತ ಧಾವಿಸಿದ್ದಾರೆ.

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆ 11:30 ಕ್ಕೆ ಪರೇಡ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ.

ಏನೆಲ್ಲಾ ವಿಶೇಷತೆಗಳಿವೆ?

  • ಈ ಬಾರಿ ಎರಡು ರಫೇಲ್ ವಿಮಾನಗಳಿಂದ ಶಕ್ತಿ ಪ್ರದರ್ಶನ ಹಾಗೂ ವಾಯುಸೇನೆ ಯುದ್ಧ ವಿಮಾನಗಳಿಂದ ಕಸರತ್ತು ನಡೆಯಲಿದೆ.
  • ಈ ಬಾರಿಯ ಪ್ರಮುಖ ಹೈಲೈಟ್ ಎಂದರೆ ಎಲ್ಲಾ ಮಹಿಳಾ ಮೂರು ಸೇನೆಗಳ ಗುಂಪು ಒಟ್ಟಿಗೇ ಸೇರಿರುವ ಐತಿಹಾಸಿಕ ತುಕಡಿ ಇಂದಿನ ಪರೇಡ್‌ನಲ್ಲಿ ಭಾಗಿಯಾಗಲಿದೆ.
  • ಪ್ರತೀ ಬಾರಿಯಂತೆ ಈ ಬಾರಿಯೂ ಬೇರೆ ಬೇರೆ ರಾಜ್ಯಗಳ ಟ್ಯಾಬ್ಲೋ ಪ್ರದರ್ಶನ ಇರಲಿದೆ. ಜೊತೆಗೆ ಚಂದ್ರಯಾನ-3 ಮಾದರಿ ಹಾಗೂ ಎಐ ತಂತ್ರಜ್ಞಾನದ ಟ್ಯಾಬ್ಲೊ ಪ್ರದರ್ಶನವಾಗಲಿದೆ.
  • ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದಾರೆ.
  • ಒಟ್ಟಾರೆ ಕಾರ್ಯಕ್ರಮದಲ್ಲಿ 13 ಸಾವಿರ ಅತಿಥಿಗಳು ಬಾಗಿಯಾಗಲಿದ್ದು, ಅವರಿಗಾಗಿ ಏಳು ಸಾವಿರ ಆಸನ ಮೀಸಲಿಡಲಾಗಿದೆ.
  • ರಕ್ಷಣಾ ಪಡೆಯ ಯೋಧರು, ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಮಾಣೆಕ್ ಷಾ ಪರೇಡ್ ಮೈದಾನದ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಮೈದಾನದೊಳಗೆ ಹೋಗಲು ಅವಕಾಶ ನೀಡಲಾಗಿದೆ. ಮೈದಾನದ ಒಳಗೆ ಬರುವವರಿಗೆ ತಿಂಡಿ, ನೀರಿನ ಬಾಟಲ್, ಗನ್, ಚಾಕು, ಯಾವುದೇ ಚೂಪಾದ ಹಾನಿ ಮಾಡಬಹುದಾದ ಪದಾರ್ಥ, ಛತ್ರಿ, ಕಪ್ಪುಬಟ್ಟೆ, ರೇಡಿಯೋ, ಕ್ಯಾಮೆರಾ, ಸಿಗರೇಟ್, ಬೆಂಕಿಪೊಟ್ಟಣ ಇನ್ನಿತರ ವಸ್ತುಗಳನ್ನು ನಿಷೇಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!