BIG BOSS | ಮತ್ತೆ ಬರ್ತಿದೆ ಬಿಗ್ ಬಾಸ್ ಒಟಿಟಿ, ಪ್ರೋಮೋ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಹು ನಿರೀಕ್ಷಿತ ಹಿಂದಿ‌ ಬಿಗ್ ಬಾಸ್ ಒಟಿಟಿ ಇದೇ ತಿಂಗಳಿನಿಂದ ಆರಂಭವಾಗಲಿದೆ.
ಸಲ್ಮಾನ್ ಖಾನ್ ಪ್ರೋಮೋದಲ್ಲಿ ಕಂಟೆಸ್ಟೆಂಟ್ಗಳಿಗೆ ವಾರ್ನಿಂಗ್ ನೀಡಿದ್ದು , ಈ ಬಾರಿ ಒಟಿಟಿ ತೂಫಾನ್ ಎಬ್ಬಿಸುವುದರಲ್ಲಿ ಅನುಮಾನವೇ ಇಲ್ಲ‌ ಎಂದಿದ್ದಾರೆ.

ಒಟಿಟಿ ಎಪಿಸೋಡ್ ಗಳು ಇದೇ ತಿಂಗಳ 17ರಿಂದ ಆರಂಭವಾಗಲಿದ್ದು, ಇದರಲ್ಲಿ‌ ಗೆಲುವು ಸಾಧಿಸುವ ಇಬ್ಬರು ಟಿವಿ ಬಿಗ್ ಬಾಸ್ ಗೆ ಎಂಟ್ರಿ ನೀಡಲಿದ್ದಾರೆ. ಒಟಿಟಿ ಸೆಮಿ ಸೆಲಬ್ರಿಟಿಗಳಿಂದ ತುಂಬಿರುತ್ತದೆ, ಇಲ್ಲಿ ಗೆಲುವು ಸಾಧಿಸಿದವರಿಗೆ ಅಲ್ಲಿ ಅವಕಾಶ ನೀಡಲಾಗುತ್ತದೆ.

ಈಗಾಗಲೇ ಸಲ್ಮಾನ್ ಖಾನ್ ಇರುವ ಪ್ರೋಮೋ ಎಲ್ಲೆಡೆ ವೈರಲ್ ಆಗಿದ್ದು, ಒಟಿಟಿಗಾಗಿ ಅಭಿಮಾನಿಗಳು‌ ಎದುರು‌ ನೋಡುತ್ತಿದ್ದಾರೆ. ಈ ಹಿಂದೆ ಕರಣ್ ಜೋಹರ್ ಒಟಿಟಿಗೆ ಹೋಸ್ಟ್ ಆಗಿದ್ದರು.‌ಆದರೆ ಇದೀಗ ಸಲ್ಮಾನ್ ವಾಪಾಸಾಗಿದ್ದಾರೆ. ಈ ಬಾರಿ ಟಾಸ್ಕ್ ಗಳು ಅಂದುಕೊಂಡದ್ದಕ್ಕಿಂತ ಕಠಿಣವಾಗಿರುತ್ತವೆ ಎಚ್ಚರಿಕೆ ಎಂದು ಸಲ್ಮಾನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!