ಜೈಲಿನಲ್ಲಿರುವ ಸಿಸೋಡಿಯಾ ನೆನೆದು ಕಣ್ಣೀರಿಟ್ಟ ಸಿಎಂ ಅರವಿಂದ್ ಕೇಜ್ರಿವಾಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಜೈಲುವಾಸ ಅನುಭವಿಸುತ್ತಿದ್ದು, ಅವರ ನೆನಪಿಸಿಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಇಂದು ಕಣ್ಣೀರಾಕಿದ್ದಾರೆ.

ದೆಹಲಿಯ ನಗರದಲ್ಲಿ ಬುಧವಾರ ಹೊಸ ಶಾಲೆಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ, ಗೆಳೆಯ ಸಿಸೋಡಿಯಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾ ಕಣ್ಣೀರಿಟ್ಟರು.

ಈ ಶಾಲೆಯನ್ನು ಮನೀಶ್ ಆರಂಭಿಸಿದರು. ಪ್ರತಿಯೊಂದು ಮಗು ಕೂಡ ಒಳ್ಳೆಯ ಶಿಕ್ಷಣ (Good Education) ವನ್ನು ಪಡೆಯಬೇಕು ಎಂಬ ಉದ್ದೇಶದಿಂದ ಅವರು ಈ ಶಾಲೆಯನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದರು. ಆದರೆ ಇದೀಗ ಅವರು ಜೈಲಿನಲ್ಲಿದ್ದಾರೆ. ಅವರು ಮಕ್ಕಳಿಗಾಗಿ ಶಾಲೆ ನಿರ್ಮಾಣ ಮಾಡುತ್ತಾರೆ ಹಾಗೂ ಒಳ್ಳೆಯ ಶಿಕ್ಷಣವನ್ನು ನೀಡುತ್ತಾರೆ ಎಂಬ ಕಾರಣಕ್ಕಾಗಿಯೇ ಮನೀಶ್ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ಕೇಜ್ರಿವಾಲ್ ಗದ್ಗದಿತರಾದರು.

ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರು ಕಳೆದ ಫೆಬ್ರವರಿಯಿಂದ ಜೈಲಿನಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!