ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 10 ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಯಾರು ಚಾಂಪಿಯನ್ ಆಗುತ್ತಾರೆ ಎಂಬುದೇ ಚರ್ಚೆಯಾಗಿದೆ. ಇದೇ ವೇಳೆ ಬಿಗ್ ಬಾಸ್ ಮನೆ ಮಂದಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ.
ಈ ಸೀಸನ್‌ನ ಹಳೆಯ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಭೇಟಿ ನೀಡಿ ತಮ್ಮ ಸ್ನೇಹಿತರನ್ನು ಪ್ರೋತ್ಸಾಹಿಸಿದರು. ಭಾಗ್ಯಶ್ರೀ, ಸ್ನೇಹಿತ್, ರಕ್ಷಕ್, ಮೈಕಲ್, ಸಿರಿ, ಇಶಾನಿ, ನೀತು ಮತ್ತಿತರರು ದಿಢೀರ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಡ್ರೋನ್ ಪ್ರತಾಪ್ ಜೊತೆ ಮಾತನಾಡಿದ ನೀತು, ಈ ಮನೆಯಲ್ಲಿ ಸಂಗೀತಾ ಮಾತ್ರ ನಿನ್ನನ್ನು ಬೆಂಬಲಿಸುತ್ತಾಳೆ. ಕೋಪ ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು. ನಮ್ರತಾ ಜೊತೆ ಮಾತನಾಡಿದ ಇಶಾನಿ, ಬೇರೆ ಯಾವುದರ ಬಗ್ಗೆ ಯೋಚಿಸಬೇಡಿ ನಿನ್ನ ಬಗ್ಗೆಯೇ ಆಲೋಚನೆ ಮಾಡು. ಆಟದ ಬಗ್ಗೆ ಗಮನ ಹರಿಸು ಎಂದು ಸಲಹೆ ನೀಡಿದರು.
ಈ ಮಧ್ಯೆ ನಮ್ರತಾ ಹಾಗೂ ಕಾರ್ತಿಕ್ ಮಧ್ಯೆ ಆಪ್ತತೆ ಬೆಳೆದಿದೆ. ಇದರಿಂದ ಸ್ನೇಹಿತ್ ಉರಿದುಕೊಂಡಿರಬಹುದು ಎಂಬುದು ನಮ್ರತಾ ಭಾವಿಸಿದರು. ಅವರನ್ನು ನೋಡಿ ಸ್ನೇಹಿತ್ ಕೈ ಮುಗಿದಿದ್ದಾರೆ.