ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಅಲ್ಲಿ ಅವರಿಗೆ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ದರ್ಶನ್ ಅವರ ಒಂದು ಫೋಟೋ ವೈರಲ್ ಆಗಿದೆ.
ಸಿಗರೇಟು ಸೇದುತ್ತಿರುವುದನ್ನು ಮತ್ತು ಕಾಫಿ ಕುಡಿಯುತ್ತಿರುವುದನ್ನು ಇದು ತೋರಿಸುತ್ತದೆ. ವೈರಲ್ ಆದ ಫೋಟೋದಿಂದಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಿದ ಆರೋಪ ದರ್ಶನ್ ಮೇಲಿದೆ. ಹಾಗಾಗಿ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ಬ್ಯಾರಕ್ನಲ್ಲಿ ಇರಿಸಲಾಗಿದೆ. ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ.
ದರ್ಶನ್ ವಿಶೇಷ ಬ್ಯಾರಕ್‌ನಿಂದ ಹೊರಬಂದು ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕೈಯಲ್ಲಿ ಕಾಫಿ ಲೋಟ ಹಿಡಿದು ಕುಳಿತಿದ್ದಾರೆ. ಕೈಯಲ್ಲಿ ಸಿಗರೇಟು ಕೂಡ ಇದೆ. ಈ ಫೋಟೋ ವೈರಲ್ ಆಗಿದೆ. ನಟನಿಗೆ ಬೇರೆ ಯಾವ ಸೌಕರ್ಯಗಳನ್ನು ಒದಗಿಸಲಾಗಿದೆ ಎಂಬ ಪ್ರಶ್ನೆಯನ್ನು ಈ ಫೋಟೋ ಹುಟ್ಟುಹಾಕಿದೆ. ಜೈಲು ಅಧಿಕಾರಿಗಳ ವರ್ತನೆ ಬಗ್ಗೆ ಅನುಮಾನ ಕೂಡ ಮೂಡಿದೆ.
ಇದು ಜೈಲಿನ ಒಳಗಡೆ ತೆಗೆದ ಫೋಟೋ ಅಲ್ಲವೇ ಅಲ್ಲ. ಜನರನ್ನ ಮೂರ್ಖರನ್ನಾಗಿ ಮಾಡಲು ಯಾರೋ ಕೆಲವರು ಮಾಡುತ್ತಿರುವ ಪ್ರಯತ್ನಗಳು ಅಂತ ಕಾಣುತ್ತದೆ.