ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋರಮಂಗಲದ ಪಬ್‌ನಲ್ಲಿ ದಕ್ಷಿಣ ಭಾರತದ ಹಾಡುಗಳನ್ನು ಪ್ಲೇ ಮಾಡಲು ಪಬ್ ಸಿಬ್ಬಂದಿ ನಿರಾಕರಿಸಿದ್ದರಿಂದ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ.
ಪಬ್ ನಲ್ಲಿ ಕನ್ನಡ ಹಾಡುಗಳನ್ನು ಪ್ಲೇ ಮಾಡಬೇಕೆಂದು ಗ್ರಾಹಕರೊಬ್ಬರು ಒತ್ತಾಯಿಸಿದರು. ಈ ವೇಳೆ ಪಬ್ ಸಿಬ್ಬಂದಿ ಕೇವಲ ಇಂಗ್ಲಿಷ್ ಹಾಡುಗಳನ್ನು ಪ್ಲೇ ಮಾಡ್ತೀವಿ ಎಂದು ಹೇಳಿದ್ದಾರೆ.
ಘಟನೆಯನ್ನು ಚಿತ್ರೀಕರಿಸಲು ಗ್ರಾಹಕರು ಮುಂದಾದರು. ವಿಡಿಯೋ ಚಿತ್ರೀಕರಣ ಆಗುತ್ತಿರುವುದನ್ನು ನೋಡಿದ ಮತ್ತೊಬ್ಬ ಪಬ್ ಉದ್ಯೋಗಿ, ವಿಡಿಯೋ ಹೊರಬಿದ್ದರೆ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿ ಪೊಲೀಸರಿಗೆ ದೂರು ನೀಡಬಹುದು ಎಂಬ ಆತಂಕದಿಂದ ಕನ್ನಡ ಹಾಡು ಹಾಕಲು ಒಪ್ಪಿಕೊಂಡಿದ್ದಾರೆ. ನಾವು ಕನ್ನಡ ಹಾಡುಗಳನ್ನು ಮಾತ್ರ ಹಾಕ್ತಿವಿ. ಆದರೆ, ತೆಲುಗು ಮತ್ತು ತಮಿಳು ಹಾಡುಗಳನ್ನು ಹಾಕುವುದಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ವೀಡಿಯೋ ಮಾಡಿ ಜೋರಾಗಿ ಕೇಳಿದಾಗ ಮಾತ್ರ ಕನ್ನಡ ಹಾಡುಗಳನ್ನು ಪ್ಲೇ ಮಾಡಲು ಸಾಧ್ಯವಾಗಿದೆ ಎಂದು ಗ್ರಾಹಕರು ನಿರಾಸೆ ವ್ಯಕ್ತಪಡಿಸಿದರು.