ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ಮೊದಲ ಹಂತದ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. 189 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಬಿಜೆಪಿ ವರಿಷ್ಠರು ಬಿಡುಗಡೆಗೊಳಿಸಿದರು.
ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಧರ್ಮೇಂದ್ರ ಪ್ರಧಾನ್ ಅವರು, ಚುನಾವಣಾ ಹಿನ್ನೆಲೆ ರಾಜ್ಯ, ರಾಷ್ಟ್ರ ಜೊತೆಯಾಗಿ ಸರ್ವೇ ಮಾಡಿ ,31 ಜಿಲ್ಲೆಗಳ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ಪಟ್ಟಿ ರಚಿಸಲಾಗಿದೆ ಎಂದರು.
ಅರುಣಾ ಸಿಂಗ್, ಮನ್ಸುಕ್ ಮಾಂಡವಿಯ , ಅಣ್ಣಾಮಲೈ ಜೊತೆಯಿದ್ದರು.