ಹೊಸದಿಗಂತ ಡಿಜಿಟಲ್ ಡೆಸ್ಕ್ :
ತ್ರಿಪುರಾದಲ್ಲಿ ಬಿಜೆಪಿ ಪಿಎಫ್ ಟಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿದೆ. ಗದ್ದುಗೆ ಏರಲು ತಯಾರಿ ನಡೆಸುತ್ತಿದೆ.
ಫೆ.16 ರಂದು ತ್ರಿಪುರಾ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಟಿಐಪಿಆರ್ ಪಕ್ಷವನ್ನು ಬದಿಗಿರಿಸಿ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ ಟಿ) ಜೊತೆಗೆ ಮೈತ್ರಿಯನ್ನು ಮರು ಸ್ಥಾಪಿಸಿದೆ.
ಬುಡಕಟ್ಟು ಮತಗಳು ವಿಭಜನೆಯಾಗುವುದನ್ನು ತಡೆಗಟ್ಟಲು ಹಾಗೂ ಬಿಜೆಪಿಯನ್ನು ದೂರ ಇಡಲು ಟಿಐಪಿಆರ್ ಎ ಮುಖ್ಯಸ್ಥ ಹಾಗೂ ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮ ಐಪಿಎಫ್ ಟಿ ತಮ್ಮ ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳಲು ಯತ್ನಿಸಿದ್ದರು. ಇದರ ಭಾಗವಾಗಿ ಐಪಿಎಫ್ ಟಿ ನಾಯಕರೊಂದಿಗೆ ಸಭೆ ನಡೆಸಿದ್ದರು.
ಆದ್ರೆ ಬಿಜೆಪಿ ಪಿಎಫ್ ಟಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿದೆ.