Friday, June 9, 2023

Latest Posts

ಫೆಬ್ರವರಿಯಲ್ಲಿ ಬ್ಯಾಂಕ್ ಗಳಿಗೆ ಇದೆ ಬರೋಬ್ಬರಿ 10 ದಿನ ರಜೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆರ್​ಬಿಐ ಫೆಬ್ರವರಿ ತಿಂಗಳ ಬ್ಯಾಂಕ್ ರಜೆ (Bank Holidays) ವಿವರವನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯ ಪ್ರಕಾರ ಫೆಬ್ರವರಿಯಲ್ಲಿ ಬ್ಯಾಂಕ್​ಗಳು ಒಟ್ಟು 10 ದಿನ ರಜೆ ಇರಲಿವೆ. ಇದರ ಜೊತೆಗೆ ಕೆಲವು ರಜೆಗಳು ರಾಜ್ಯಗಳ ವ್ಯಾಪ್ತಿಯಲ್ಲಿ ಮಾತ್ರ ಇರುವುದರಿಂದ ದೇಶದಾದ್ಯಂತ ಎಲ್ಲ ಬ್ಯಾಂಕ್​ಗಳಿಗೂ ಅನ್ವಯವಾಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್​ ರಜೆ ಮಾತ್ರ ದೇಶದ ಎಲ್ಲ ಬ್ಯಾಂಕ್​ಗಳಿಗೆ ಅನ್ವಯವಾಗುತ್ತದೆ.

ಫೆಬ್ರವರಿ 5 ಭಾನುವಾರ ಬ್ಯಾಂಕ್​ಗಳು ರಜೆ ಇರಲಿವೆ. 11ನೇ ತಾರೀಖಿನಂದು ಎರಡನೇ ಶನಿವಾರ. 12ರಂದು ಭಾನುವಾರ ಆಗಿದ್ದು, ಬ್ಯಾಂಕ್​ ರಜೆ ಇರಲಿದೆ. ಫೆಬ್ರವರಿ 15ರ ಬುಧವಾರ ಮಣಿಪುರದಲ್ಲಿ ಲುಯಿ ನಗಾಯ್ ನಿ ಹಬ್ಬದ ಪ್ರಯುಕ್ತ ಬ್ಯಾಂಕ್ ರಜೆ ಇರಲಿದೆ. ಫೆಬ್ರವರಿ 18ರ ಶನಿವಾರ ಮಹಾಶಿವರಾತ್ರಿ ಪ್ರಯುಕ್ತ ಬ್ಯಾಂಕ್​ಗಳು ರಜೆ ಇರಲಿವೆ. 19ರಂದು ಭಾನುವಾರ ಮತ್ತು ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುತ್ತದೆ. ಹೀಗಾಗಿ ಬ್ಯಾಂಕ್​ಗಳು ರಜೆ ಇರಲಿವೆ.

ಫೆಬ್ರವರಿ 20ರಂದು ಸೋಮವಾರ ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯ ದಿನದ ಪ್ರಯುಕ್ತ ಬ್ಯಾಂಕ್ ರಜೆ ಇರಲಿದೆ. 21ರಂದು ಸಿಕ್ಕಿಂನಲ್ಲಿ ಲೋಸರ್ ಹಬ್ಬದ ಪ್ರಯುಕ್ತ ರಜೆ ಇದೆ. ಫೆಬ್ರವರಿ 25 ನಾಲ್ಕನೇ ಶನಿವಾರ ಆಗಿದ್ದು ದೇಶದಾದ್ಯಂತ ಬ್ಯಾಂಕ್​ಗಳು ರಜೆ ಇರಲಿವೆ. 26ರಂದು ಭಾನುವಾರ ಆಗಿದ್ದು ಬ್ಯಾಂಕ್​ಗಳು ರಜೆ ಇರಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!