BIG NEWES | ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಉತ್ತರ ಪ್ರದೇಶದ ಅಮೇಥಿಯಲ್ಲಿ ತರಬೇತಿ ವಿಮಾನವೊಂದು ಪತನವಾಗಿದ್ದು, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಲಘು ವಿಮಾನವು ತುರ್ತು ಭೂಸ್ಪರ್ಶವಾಗಿದ್ದು, ಟ್ರೈನಿ ಪೈಲಟ್ ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಯ (IGRUA) ಮಾಧ್ಯಮ ಉಸ್ತುವಾರಿ ಆರ್ ಕೆ ದ್ವಿವೇದಿ ತಿಳಿಸಿದ್ದಾರೆ.
ತರಬೇತಿಯಲ್ಲಿದ್ದ ಪೈಲಟ್ ಅಭಿಯ್ ಪಟೇಲ್ ಅವರು ಅಕಾಡೆಮಿಯಿಂದ ತರಬೇತಿಗಾಗಿ ಹೊರಟಿದ್ದರು. ಆದರೆ ಅಮೇಥಿ-ರಾಯ್ ಬರೇಲಿ ಗಡಿಯಲ್ಲಿರುವ ಮೊಹಮ್ಮದ್‌ಪುರ ಚುರೈ ಗ್ರಾಮದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಲ್ಯಾಂಡಿಂಗ್ ಸಮಯದಲ್ಲಿ, ವಿಮಾನದ ಮುಂಭಾಗದ ಭಾಗವು ಹಾನಿಗೊಳಗಾಯಿತು ಎಂದು ದ್ವಿವೇದಿ ಹೇಳಿದ್ದಾರೆ.
ಅಭಯ್ ಪಟೇಲ್ ಅವರು 2021ರಲ್ಲಿ IGRUAನಲ್ಲಿ ದಾಖಲಾಗಿದ್ದರು. ಅವರು 27 ಗಂಟೆಗಳ ವಿಮಾನ ಹಾರಾಟ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!