ಗುಜರಿ ಅಂಗಡಿಯಲ್ಲಿ ಗುಂಡು ತಯಾರಿಕೆ – ಮೋದಿ ಪುಣೆ ಭೇಟಿ ಗುರಿಯಾಗಿಸಿ ನಡೆದಿತ್ತೇ ವಿಧ್ವಂಸದ ಸಂಚು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಹಾರಾಷ್ಟ್ರದ ಪುಣೆಗೆ ಪ್ರಧಾನ ನರೇಂದ್ರ ಮೋದಿಯವರ ಭೇಟಿಗೂ ಎರಡು ದಿನ ಮೊದಲು ಪುಣೆಯ ಭವಾನಿ ಪೇಠ್ ನ ಮನೆಯೊಂದರಲ್ಲಿ ನಡೆದ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು ರಶೀದ್ ಶೇಖ್ ಎಂಬಾತನ್ನು ಪೋಲೀಸರು ಬಂಧಿಸಿದ್ದಾರೆ. ಆತ ತನ್ನ ಮನೆಯಲ್ಲಿ ‘ವಾಷಿಂಗ್ ಮೆಷಿನ್’ ರಿಪೇರಿ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಮನೆಯ ಹುಡುಕಾಟದ ಸಮಯದಲ್ಲಿ ಹಲವಾರು ಸಿಮ್ ಕಾರ್ಡ್‌ಗಳು, ಅನುಮಾನಾಸ್ಪದ ವಸ್ತುಗಳು ಮತ್ತು ಆಕ್ಷೇಪಾರ್ಹ ಸಾಹಿತ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

ಅದೇ ರೀತಿ ಇನ್ನೊಂದು ಘಟನೆಯಲ್ಲಿ ಗುಜರಿ ಅಂಗಡಿಯೊಂದರ ಮೇಲೆ ದಾಳಿನಡೆಸಿದ ಪೋಲೀಸರು ಸುಮಾರು 1,60,000 ಮೌಲ್ಯದ 1,100 ಜೀವಂತ ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪುಣೆಯ ಸಂತ ತುಕಾರಾಂ ಶಿಲಾ ಮಂದಿರವನ್ನು ಉದ್ಘಾಟಿಸಲು ಜೂ.14ರಂದು ಪ್ರಧಾನಿ ನರೇಂದ್ರ ಮೋದಿ ಪುಣೆಗೆ ಬೇಟಿ ನೀಡಲಿದ್ದಾರೆ. ಅವರ ಭೇಟಿಗೂ ಮೊದಲು ಈ ರೀತಿಯ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಸ್ತುತ ಪ್ರಧಾನಿ ಭೇಟಿ ನೀಡಲಿರುವ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಇವುಗಳ ನಡುವೆ ಇಸ್ಲಾಮಿಕ್ ಸಂಘಟನೆ ಅಲ್-ಖೈದಾ ಭಾರತದ ಹಲವಾರು ರಾಜ್ಯಗಳಲ್ಲಿ ಆತ್ಮಹತ್ಯಾ ದಾಳಿಗಳ ಬಗ್ಗೆ ಭಾರತಕ್ಕೆ ಎಚ್ಚರಿಕೆ ನೀಡಿತ್ತು. ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ “ಮುಹಮ್ಮದ್ ಗೌರವಕ್ಕಾಗಿ ಹೋರಾಡಲು” ಆತ್ಮಾಹುತಿ ದಾಳಿಗಳನ್ನು ನಡೆಸುವುದಾಗಿ ಹೇಳಿತ್ತು. ಜೂನ್‌ 6ರಂದು ಪತ್ರವೊಂದರಲ್ಲಿ ಅಲ್‌ ಖೈದಾ  “ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲುತ್ತೇವೆ, ನಮ್ಮ ದೇಹ ಮತ್ತು ನಮ್ಮ ಮಕ್ಕಳ ದೇಹಗಳೊಂದಿಗೆ ಸ್ಫೋಟಕಗಳನ್ನು ಕಟ್ಟಿಕೊಂಡು ನಮ್ಮ ಪ್ರವಾದಿಯನ್ನು ಅವಮಾನಿಸುವ ಧೈರ್ಯವಿರುವವರ ಎಲ್ಲರನ್ನೂ ಸ್ಫೋಟಿಸುತ್ತೇವೆ. ಯುಪಿ, ಗುಜರಾತ್, ದೆಹಲಿ, ಬಾಂಬೆಯಲ್ಲಿ ಕೇಸರಿ ಭಯೋತ್ಪಾದಕರ ಅಂತ್ಯ ಮಾಡುತ್ತೇವೆ” ಎಂದು ಹೇಳಿತ್ತು.

ಪ್ರಸ್ತುತ ಪ್ರಧಾನಿ ಭೇಟಿಗೂ ಮುನ್ನವೇ ನಡೆದಿರುವ ಈ ಘಟನೆಗಳು ಹಲವು ಅನುಮಾನ, ಆತಂಕಗಳನ್ನು ಹುಟ್ಟು ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!