BIG NEWS | ಲ್ಯಾಂಡಿಂಗ್​ ವೇಳೆ ರನ್​ವೇಯಿಂದ ಜಾರಿದ ಏರ್​ ಇಂಡಿಯಾ ವಿಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರದೇಶದ ಡುಮ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆಗ್ತಿದ್ದ ವೇಳೆ ಏರ್​ ಇಂಡಿಯಾ ವಿಮಾನವೊಂದು ಸ್ಕಿಡ್​ ಆಗಿ ರನ್​ವೇಯಿಂದ ಜಾರಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದೆಹಲಿ-ಜಬಲ್ಪುರ್-ಬಿಲಾಸ್ಪುರ್ ನಡುವೆ ಸಂಚಾರಿಸುತ್ತಿದ್ದ ಏರ್ ಇಂಡಿಯಾ ವಿಮಾನ , ದೆಹಲಿ ಏರ್​ಪೋರ್ಟ್​​ನಿಂದ ಜಬಲ್ಪುರ್​ ಡುಮ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ವಿಮಾನ ಲ್ಯಾಂಡಿಂಗ್​ ಸಮಯದಲ್ಲಿ ರನ್​ವೇಯಿಂದ ಜಾರಿದ್ದು, ವಿಮಾನದ ಒಂದು ಚಕ್ರ ನೆಲಕ್ಕೆ ಅಪ್ಪಳಿಸಿದ್ದು, ದಿಢೀರ್​ ಆಗಿ ಸ್ಫೋಟಗೊಂಡಿದೆ. ಆದರೆ, ಅದೃಷ್ಟವಶಾತ್​​ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ.
ಇನ್ನು ಅಪಘಾತದ ಬಗ್ಗೆ ವಿಮಾನ ನಿಲ್ದಾಣದ ಆಡಳಿತ ಮಂಡಳಿ ತನಿಖೆಗೆ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!