BIG NEWS | ಏರ್ ಟ್ರಾಫಿಕ್ ಕಂಟ್ರೋಲ್ ವೈಫಲ್ಯ: ಬ್ರಿಟನ್ ನಲ್ಲಿ ವಿಮಾನ ಸಂಚಾರ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ರಿಟನ್​​ನ ಏರ್ ಟ್ರಾಫಿಕ್ ಕಂಟ್ರೋಲ್ (UK air traffic control) ಸಿಸ್ಟಮ್‌ ವಿಫಲವಾಗಿದೆ. ಇದರಿಂದ ಅಂತಾರಾಷ್ಟ್ರೀಯ ವಿಮಾನಗಳು ವಿಳಂಬವಾಗಲಿದೆ .

ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಇದರಿಂದ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದು ವಿಮಾನಗಳ ಹಾರಾಟ ನಿರ್ಬಂಧಿಸಲಾಗಿದೆ ಎಂದು ಬ್ರಿಟನ್‌ನ ರಾಷ್ಟ್ರೀಯ ವಾಯು ಸಂಚಾರ ಸೇವೆ (NATS) ವಕ್ತಾರರು ಹೇಳಿದ್ದಾರೆ.

ನಾವು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಂಚಾರ ನಿರ್ಬಂಧಿಸಲಾಗಿದೆ. ಎಂಜಿನಿಯರ್‌ಗಳು ದೋಷವನ್ನು ಪತ್ತೆಹಚ್ಚಲು ಮತ್ತು ಸರಿಪಡಿಸಲು ಶ್ರಮಿಸುತ್ತಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಸಿಸ್ಟಂ ವೈಫಲ್ಯದ ಪರಿಣಾಮ,ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಳ್ಳಲು ಬೇಕಾದ ಕಾರ್ಯಗಳಿಗಾಗಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಲಂಡನ್ ಲುಟನ್ ವಿಮಾನ ನಿಲ್ದಾಣ ಹೇಳಿದೆ.

ಏತನ್ಮಧ್. ಡಬ್ಲಿನ್ ವಿಮಾನ ನಿಲ್ದಾಣವು ಏರ್ ಟ್ರಾಫಿಕ್ ಕಂಟ್ರೋಲ್ ಸಮಸ್ಯೆಗಳಿಂದಾಗಿ ಐರಿಶ್ ರಾಜಧಾನಿಯ ಒಳಗೆ ಮತ್ತು ಹೊರಗೆ ಕೆಲವು ವಿಮಾನಗಳಿಗೆ ವಿಳಂಬ ಮತ್ತು ರದ್ದತಿಗೆ ಕಾರಣವಾಗುತ್ತಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!