Friday, September 29, 2023

Latest Posts

ಚಂದ್ರನ ಅಂಗಳದಲ್ಲಿ ಈ ಬಾಲಿವುಡ್ ಸೆಲೆಬ್ರಿಟಿಗಳಿಗಿದೆ ಜಾಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

‘ಚಂದ್ರಯಾನ 3’ ಉಪಗ್ರಹ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಇದೀಗ ಚಂದ್ರನ ಮೇಲೆ ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ.

ಚಂದ್ರನ ಮೇಲೆ ಶಾರುಖ್ ಖಾನ್ (​​Shah Rukh Khan) ಸೇರಿ ಅನೇಕ ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ. ಹಾಗಂತ ಈ ಜಾಗದ ಮೇಲೆ ನೀವು ಹಕ್ಕು ಸಾಧಿಸೋಕೆ ಆಗುವುದಿಲ್ಲ.

ಶಾರುಖ್ ಖಾನ್
ಬಾಲಿವುಡ್ ನಟ ಶಾರುಖ್ ಖಾನ್ ಚಂದ್ರನ ಮೇಲೂ ತಮ್ಮ ಆಸ್ತಿ ಹೊಂದಿದ್ದಾರೆ. ಅಚ್ಚರಿ ಎಂದರೆ ಆಸ್ಟ್ರೇಲಿಯಾದ ಮಹಿಳಾ ಅಭಿಮಾನಿ ಪ್ರತಿ ವರ್ಷ ಅವರ ಹುಟ್ಟು ಹಬ್ಬದಂದು ಚಂದ್ರನ ಮೇಲೆ ಜಾಗ ಖರೀದಿಸಿ ನೀಡುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಶಾರುಖ್ ಖಾನ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಚಂದ್ರನ ಮೇಲೆ ‘ಸೀ ಆಫ್ ಟ್ರಾನ್​ಕ್ವಾಲಿ’ ಹೆಸರಿನ ಪ್ರದೇಶದಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್
ಬಾಲಿವುಡ್ ನಟ ದಿ. ಸುಶಾಂತ್ ಸಿಂಗ್ ರಜಪೂತ್ ಚಂದ್ರನ ‘ಮರ್ರೆ ಮಾಸ್ಕೋವಿ (ಸೀ ಆಫ್ ಮಾಸ್ಕೋವಿ)’ ಎಂಬಲ್ಲಿ ಜಾಗವನ್ನು ಹೊಂದಿದ್ದರು. ಇವರು ಇದಕ್ಕಾಗಿ ಸುಮಾರು 55 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಇಂಜಿನಿಯರಿಂಗ್ ಪದವಿಧರರಾದ ಇವರು ಬಾಹ್ಯಾಕಾಶದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಈ ಬಗ್ಗೆ ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ಅಂಕಿತ್ ಗುಪ್ತಾ
ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅವರು ಹಿಂದಿ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಅವರು ಚಂದ್ರನ ಮೇಲೆ ಆಸ್ತಿ ಹೊಂದಿದ್ದಾರೆ. ಇವರ ಅಭಿಮಾನಿಯೊಬ್ಬರು ಈ ಜಾಗವನ್ನು ಖರೀದಿಸಿ ನೀಡಿದ್ದಾರೆ ಎನ್ನಲಾಗಿದೆ.

ಪ್ರಿಯಾಂಕಾ ಚಹರ್ ಚೌಧರಿ
ಚಂದ್ರನ ಮೇಲೆ ಆಸ್ತಿಯನ್ನು ಹೊಂದಿರುವ ಪೈಕಿ ಕಿರುತೆರೆ ನಟಿ ಪ್ರಿಯಾಂಕಾ ಚಹರ್ ಚೌಧರಿ ಕೂಡ ಒಬ್ಬರು. ಇವರು ‘ಬಿಗ್ ಬಾಸ್ ಹಿಂದಿಯ 16ನೇ ಸೀಸನ್​’ನಲ್ಲಿ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್​​ ಮನೆಯಿಂದ ಹೊರ ಬಂದ ಬಳಿಕ ಅವರಿಗೆ ಅಭಿಮಾನಿಯೊಬ್ಬರು ಚಂದ್ರನ ಮೇಲಿನ ಜಾಗ ಖರೀದಿಸಿ ಇವರಿಗೆ ನೀಡಿದ್ದರು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!