BIG NEWS | ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಅರ್ಚಕನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ಚಟ್ಟೋಗ್ರಾಮ್‌ನಲ್ಲಿ ಮತ್ತೊಬ್ಬ ಹಿಂದು ಅರ್ಚಕನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಂಧಿತ ಅರ್ಚಕರನ್ನು ಶ್ಯಾಮ್ ದಾಸ್ ಪ್ರಭು ಎಂದು ಗುರುತಿಸಲಾಗಿದ್ದು, ಅವರು ಜೈಲಿನಲ್ಲಿ ಚಿನ್ಮೋಯ್ ಕೃಷ್ಣ ದಾಸ್ ದಾಸ್ ಅವರನ್ನು ಭೇಟಿಯಾಗಲು ಹೋಗಿದ್ದರು ಎಂದು ವರದಿಯಾಗಿದೆ. ಯಾವುದೇ ಅಧಿಕೃತ ವಾರಂಟ್ ಇಲ್ಲದೇ ಅವರನ್ನು ಬಂಧಿಸಲಾಗಿದೆ .

ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರರಾದ ರಾಧರಮ್ ದಾಸ್ ಅವರು ಸನ್ಯಾಸಿಯ ಬಂಧನದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇನ್ನೊಬ್ಬ ಬ್ರಹ್ಮಚಾರಿ ಶ್ರೀ ಶ್ಯಾಮ್ ದಾಸ್ ಪ್ರಭುವನ್ನು ಇಂದು ಚಟ್ಟೋಗ್ರಾಮ್ ಪೊಲೀಸರು ಬಂಧಿಸಿದ್ದಾರೆ” ಎಂದು ಹೇಳಿದರು.

ಬಾಂಗ್ಲಾದೇಶದ ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಮಾಜಿ ಸದಸ್ಯ ಹಿಂದು ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸೋಮವಾರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಮಂಗಳವಾರ ಜಾಮೀನು ನಿರಾಕರಿಸಲಾಗಿದೆ. ಇದರ ಬೆನ್ನಲ್ಲೇ ಅರ್ಚಕರನ್ನು ಶ್ಯಾಮ್ ದಾಸ್ ಪ್ರಭುರನ್ನು ಬಂಧಿಸಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!