‘ಫೆಂಗಲ್‌’ ಚಂಡಮಾರುತ ಅಬ್ಬರ: ಚೆನ್ನೈನಲ್ಲಿ ಪ್ರವಾಹದ ನೀರಿನಲ್ಲಿ ತೇಲಿದ ವ್ಯಕ್ತಿಯ ಶವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಂಗಲ್‌ ಚಂಡಮಾರುತ ಅಬ್ಬರಕ್ಕೆ ಚೆನ್ನೈನ ಎಟಿಎಂ ಬಳಿ ವಿದ್ಯುತ್‌ ಪ್ರವಹಿಸಿ ವ್ಯಕ್ತಿಯ ಶವ ತೇಲುತ್ತಿರುವುದು ಪತ್ತೆಯಾಗಿದೆ.

ಮೃತದೇಹವೊಂದು ತೇಲುತ್ತಿತ್ತು. ಕೆಲವರು ಮೃತದೇಹವನ್ನು ಮರದ ಕಂಬದಿಂದ ದೂಡಿದರು. ನಂತರ ಚೆನ್ನೈನ ಎಟಿಎಂನ ಹೊರಗೆ ಪ್ರವಾಹದ ನೀರಿನಿಂದ ದೇಹವನ್ನು ಹೊರತೆಗೆಯಲಾಯಿತು. ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದುವರೆಗೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

ಫೆಂಗಲ್‌ ಎಂಬ ಪ್ರಬಲ ಚಂಡಮಾರುತದಿಂದ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಜೆ 7 ಗಂಟೆಯ ವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಗರದ ಹಲವೆಡೆ ಜಲಾವೃತವಾಗಿರುವ ಬಗ್ಗೆ ವರದಿಯಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!