BIG NEWS | ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ: KPTCL SDA ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ

ಹೊಸದಿಗಂತ ವರದಿ, ಗದಗ:

ರಾಜ್ಯದಲ್ಲಿ ಇತ್ತೀಚಿಗೆ ಪಿಎಸ್‌ಐ ಪರೀಕ್ಷೆಯ ಅಕ್ರಮ ಹಗರಣವು ಮಾಸುವ ಮುನ್ನವೆ ಮತ್ತೊಂದು ಪರೀಕ್ಷಾ ಅಕ್ರಮ ನಡೆದಿರುವ ಘಟನೆ ನಗರದ ಜನರನ್ನು ಮತ್ತೆ ಬೆರಗಾಗುವಂತೆ ಮಾಡಿದೆ.

ಇತ್ತೀಚಿಗೆ ರಾಜ್ಯಾಧ್ಯಂತ ಕೆಪಿಟಿಸಿಎಲ್‌ನ ಕಿರಿಯ ಸಹಾಯಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ರಾಜ್ಯದ ವಿವಿದೆಡೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಿದ್ದವು. ಆದರೆ, ಈ ಪರೀಕ್ಷೆಗಳಲ್ಲಿಯೂ ಪ್ರಶ್ನೆಪತ್ರಿಕೆ ಸೂರಿಕೆಯಾಗಿರುವ ಜಾಡನ್ನು ಹಿಡಿದು ಸೈಬರ್ ಕ್ರೈಂ ಪೊಲೀಸರು ನಗರಕ್ಕೆ ಬಂದಿರುವುದು ಅಶ್ಚರ್ಯ ಮೂಡಿಸಿದೆ. ಇದಕ್ಕೆ ಪೂರಕವೆಂಬಂತೆ ಬೆಳಗಾವಿಯ ಸೈಬರ್‌ಕ್ರೈಂ ಪೊಲೀಸರು ನಗರದ ಮುನಸಿಪಲ್ ಕಾಲೇಜಿನ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಉಪಪ್ರಾಚಾರ್ಯ ಮಾರುತಿ ಸೋನಾವನೆ ಹಾಗೂ ಅವರ ಮಗ ಸಮೀತಕುಮಾರ ಕೈ ಜೋಡಿಸಿರುವ ಅಂಶ ಬೆಳಕಿಗೆ ಬಂದಿದ್ದು ಈ ಬಗ್ಗೆ ಇಬ್ಬರನ್ನು ಬಂಧಿಸಿರುವ ಪೊಲೀಸರು ತ್ರೀವ ತನಿಖೆ ನಡೆಸುತ್ತಿದ್ದಾರೆ.

ಪ್ರಶ್ನೆ ಪತ್ರಿಕೆ ಸೂರಿಕೆ ಆಗಿದ್ದು ಹೇಗೆ? :
ಆಗಷ್ಟ್ ೭ರ ೨೦೨೨ರಲ್ಲಿ ಕೆಪಿಟಿಸಿಎಲ್‌ನ ಕಿರಿಯ ಸಹಾಯಕ ಹುದ್ದೆಗೆ ಅವಳಿ ನಗರದ ೨೧ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿತ್ತು ಈ ಸಂದರ್ಭದಲ್ಲಿ ಪತ್ರಕರ್ತನ ಸೋಗಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಅದೇ ಕಾಲೇಜಿನ ಉಪಪ್ರಾಚಾರ್ಯ ಮಾರುತಿ ಸೋನಾವನೆ ಅವರ ಮಗ ಸಮೀತಕುಮಾರ ತನ್ನ ಮೂಬೈಲ್ ಮೂಲಕ ಪ್ರಶ್ನೆ ಪತ್ರಿಕೆಗಳ ಪೋಟೋಗಳನ್ನು ಸೆರೆ ಹಿಡಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ, ರಾಜ್ಯದ ಇತರೆ ಪರೀಕ್ಷಾ ಕೇಂದ್ರಗಳಿಗೂ ಕಳುಹಿಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡೆಸಿದ್ದಾರೆ. ಸಮೀತಕುಮಾರ ಮೂಬೈಲ್‌ಗಾಗಿ ಕಾಲೇಜಿನ ಸುತ್ತಮುತ್ತ ತೀವೃ ಶೋಧ ನಡೆಸಿದ್ದಾರೆ. ಈ ಕುರಿತು ಕಾಲೇಜಿನ ಪ್ರಾಚಾರ್ಯ ಕುಲಕರ್ಣಿ ಅವರನ್ನು ವಿಚಾರಣೆ ನಡೆಸಿದ್ದಾರೆ.

ಪ್ರಶ್ನೆಪತ್ರಿಕೆ ಸೂರಿಕೆ ಆಗಿರುವ ಜಾಡು ಹಿಡಿದು ಬಂದ ಬೆಳಗಾವಿಯ ಸೈಬರ್ ಕ್ರೈಂ ಪೊಲೀಸ್ ಇನಸ್ಪೆಕ್ಟರ್ ವಿರೇಶ ದೊಡ್ಡಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಈ ಕೃತ್ಯದ ಹಿಂದೆ ಯಾರು ಶಾಮೀಲಾಗಿದ್ದಾರೆ, ಮತ್ತೆ ಯಾರನ್ನು ಬಂಧಿಸಲಿದ್ದಾರೆ ಎನ್ನುವ ಕುರಿತು ತನಿಖೆಯ ನಂತರ ತಿಳಿದು ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!