ಸಂದರ್ಶನದಲ್ಲಿ ಮಹಿಳೆ ವಯಸ್ಸು ಕೇಳಿದ ಕಂಪನಿಗೆ ಶಾಕ್ ಕೊಟ್ಟ ಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಾರತಮ್ಯ ಮಾಡಿದ್ದಕ್ಕಾಗಿ ಮಹಿಳೆ ಡೊಮಿನೋಸ್‌ ವಿರುದ್ಧ ಕಾನೂನು ಹೋರಾಟ ನಡೆಸಿ ಗೆದ್ದ ಘಟನೆ ಉತ್ತರ ಐರ್ಲೆಂಡ್‌ ನಲ್ಲಿ ನಡೆದಿದೆ.
ಇಲ್ಲಿನ ಜಾನಿಸ್ ವಾಲ್ಷ್ ಕೌಂಟಿ ಟೈರೋನ್‌ನ ಸ್ಟ್ರಾಬೇನ್‌ನಲ್ಲಿರುವ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಡೆಲಿವರಿ ಡ್ರೈವರ್ ಹುದ್ದೆಗೆ ಮಹಿಳೆ ಅರ್ಜಿ ಸಲ್ಲಿಸಿದ್ದಳು.ಇದರ ಸಂದರ್ಶನದ ಆರಂಭದಲ್ಲಿ, ವಯಸ್ಸನ್ನು ಕೇಳಲಾಯಿತು. ಸಂದರ್ಶಕ ಆಕೆಯ ಉತ್ತರವನ್ನ ವಿಶೇಷವಾಗಿ ಮಾರ್ಕ್‌ ಮಾಡಿದ್ದನ್ನ ಜಾನಿಸ್‌ ಗಮನಿಸಿದ್ದಾಳೆ.
ಇದರಿಂದ ಉದ್ಯೋಗಕ್ಕೂ ತನ್ನ ವಯಸ್ಸಿಗೂ ಸಂಬಂಧ ಕಲ್ಪಿಸ್ತಾ ಇರೋದು ಜಾನಿಸ್‌ಗೆ ಇಷ್ಟವಾಗದೆ ಕೂಡಲೇ ಅವಳು ಡಾಮಿನೋಸ್‌ ಔಟ್ಲೆಟ್‌ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಇದರಲ್ಲಿಜಾನಿಸ್‌ಗೆ ಜಯ ಸಿಕ್ಕಿದ್ದು, 4000 ಡಾಲರ್‌ ಅಂದ್ರೆ 3,78,112 ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್‌ ಡೊಮಿನೋಸ್‌ಗೆ ಸೂಚಿಸಿದೆ.
ಸಂದರ್ಶನ ಸಮಿತಿಯ ನಿರ್ಧಾರದ ಮೇಲೆ ತನ್ನ ವಯಸ್ಸು ಪರಿಣಾಮ ಬೀರಿರುವುದು ದುರದೃಷ್ಟಕರ ಎನ್ನುತ್ತಾಳೆ ಈ ಮಹಿಳೆ.
ಜಾನಿಸ್‌ ಅರ್ಜಿ ಸಲ್ಲಿಸಿದ ಉದ್ಯೋಗ 18 ಮತ್ತು 30ರ ನಡುವಿನವರಿಗೆ ಸರಿಹೊಂದುತ್ತದೆ ಎಂದು ಔಟ್ಲೆಟ್ನಲ್ಲಿ ಇನ್ನೊಬ್ಬ ಉದ್ಯೋಗಿ ಹೇಳಿದ್ದನ್ನು ಕೇಳಿದ್ದಾಳೆ. ನಾನು ಒಬ್ಬ ಮಹಿಳೆ ಎಂಬ ಕಾರಣದಿಂದ ಡ್ರೈವರ್ ಹುದ್ದೆಗೆ ನನ್ನನ್ನು ಕಡೆಗಣಿಸಲಾಗಿದೆ ಅನ್ನೋದು ಆಕೆಗೆ ಖಚಿತವಾಗಿತ್ತು.ಯಾಕಂದ್ರೆ ಆಕೆಯನ್ನು ಸಂದರ್ಶಿಸಿದ ನಂತರವೂ ಡೊಮಿನೋಸ್‌ ಡ್ರೈವರ್‌ ಬೇಕೆಂಬ ಜಾಹೀರಾತು ನೀಡುವುದನ್ನು ಮುಂದುವರಿಸಿತ್ತು. ಇದರಿಂದ ನೊಂದ ಮಹಿಳೆ ಡೊಮಿನೋಸ್‌ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!