BIG NEWS | ಬಿಹಾರದಲ್ಲಿ ವಿಶ್ವಾಸಮತ ಗೆದ್ದ ಸಿಎಂ ನಿತೀಶ್ ಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ.

243 ಶಾಸಕರ ಬಲವಿರುವ ಬಿಹಾರ ವಿಧಾನಸಭೆಯಲ್ಲಿ 129 ಮತಗಳನ್ನು ಪಡೆಯುವ ಮೂಲಕ ಗೆದ್ದಿದ್ದಾರೆ.

ಒಟ್ಟು 243 ಸದಸ್ಯಬಲದ ಬಿಹಾರದಲ್ಲಿ ಬಹುಮತಕ್ಕೆ 122 ಸದಸ್ಯರ ಅಗತ್ಯವಿತ್ತು, ಬಿಜೆಪಿ -ಜೆಡಿಯು ಮೈತ್ರಿಕೂಟ 128 ಸದಸ್ಯರನ್ನು ಹೊಂದಿದೆ. ಬಿಜೆಪಿಯ 78 ಶಾಸಕರಿದ್ದು ನಿತೀಶ್​ ಕುಮಾರ್ ಅವರ ಸಂಯುಕ್ತ ಜನತಾದಳ 45 ಶಾಸಕರನ್ನು ಹೊಂದಿದೆ. ಜಿತಿನ್ ರಾಮ್ ಮಾಂಜಿ ಹಿಂದೂಸ್ತಾನ್ ಅವಾಮ್ ಮೋರ್ಚಾ 4 ಸ್ಥಾನಗಳನ್ನು ಹೊಂದಿತ್ತು.ಇನ್ನುಳಿದಂತೆ ಒಬ್ಬ ಪಕ್ಷೇತರ ಈ ಮೈತ್ರಿಕೂಟವನ್ನು ಬೆಂಬಲಿಸಿದ್ದರು. ವಿರೋಧಿ ಕೂಟವಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್​ 114 ಸ್ಥಾನಗಳನ್ನು ಹೊಂದಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!