ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರೀಕ್ಷೆ ಹತ್ರ ಬಂದಿದೆ, ಚೆನ್ನಾಗಿ ಓದ್ಕೊಳಪ್ಪ ಅಂತ ಪೋಷಕರು ಹೇಳಿದ್ದಕ್ಕೆ ಬಾಲಕನೊಬ್ಬ ಮನೆ ಬಿಟ್ಟು ಹೋಗಿದ್ದಾನೆ.
ದಾವಣಗೆರೆಯ ಎಸ್‌ಎಸ್ ಲೇಔಟ್‌ನ ಎಂಟನೇ ತರಗತಿ ವಿದ್ಯಾರ್ಥಿ ಸಾತ್ವಿಕ್‌ಗೆ ಪೋಷಕರು ಟೈಮ್ ವೇಸ್ಟ್ ಮಾಡ್ಬೇಡ. ಓದ್ಕೊ ಎಂದು ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾದ ಸಾತ್ವಿಕ್ ಮನೆ ಬಿಟ್ಟು ಹೋಗಿದ್ದಾನೆ. ಮಗ ಇಂದು ಬರ್ತಾನೆ, ನಾಳೆ ಬರ್ತಾನೆ ಎಂದು ವಾರದಿಂದ ಕಾದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ರೈಲಿನ ಮುಖಾಂತರ ಸಾತ್ವಿಕ್ ಹುಬ್ಬಳ್ಳಿ ತಲುಪಿರುವ ಮಾಹಿತಿ ದೊರೆತಿದೆ. ಆದರೆ ಆಕಾಶ್ ಇನ್ನೂ ಸಿಕ್ಕಿಲ್ಲ!
ರೀಸನ್ ಸಾವಿರ ಇರಬಹುದು, ಎಂದಿಗೂ ತಂದೆ ತಾಯಿಗೆ ನೋವುಂಟುಮಾಡುವ ಈ ರೀತಿ ಕೆಲಸಗಳನ್ನು ಮಾಡಬೇಡಿ. ಪೋಷಕರ ಜೊತೆ ಕೂತು ಮುಕ್ತವಾಗಿ ಮಾತನಾಡಿ. ಮನೆ ಬಿಟ್ಟು ಹೋದ ನಿಮಗೂ ಕಷ್ಟ ಎದುರಾಗಬಹುದು. ದೊಡ್ಡ ನಿರ್ಧಾರ ಕೈಗೊಳ್ಳುವ ಮೊದಲು ಪ್ರೀತಿಸುವ ಪೋಷಕರನ್ನು, ಕಳೆದ ಒಳ್ಳೆಯ ನೆನಪುಗಳನ್ನು ಮೆಲುಕು ಹಾಕಿ. ಒಂದು ಕ್ಷಣದ ನಿರ್ಧಾರ ಜೀವನವನ್ನು ಹಾಳುಮಾಡಬಹುದು. ಇದು ಹೊಸದಿಗಂತ ಕಳಕಳಿಯ ಮನವಿ