BIG NEWS | ಕೊರೋನಾ ಆತಂಕ: ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪಿಎಂ ಪ್ರಧಾನ ಕಾರ್ಯದರ್ಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಆತಂಕದ ನಡುವೆ ದೇಶವು ಹೊಸ ವರ್ಷ ಸ್ವಾಗತಿಸಲು ಸಜ್ಜಾಗುತ್ತಿದ್ದು, ಈ ನಡುವೆ ದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಅವರ ನಿರ್ದೇಶನದ ಮೇರೆಗೆ ಕೋವಿಡ್ ಸ್ಥಿತಿಗತಿ ಸಭೆ ನಡೆದಿದೆ.

ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ ಮಿಶ್ರಾ ಅವರು ದೇಶದಲ್ಲಿ ಕೋವಿಡ್-19 ಸ್ಥಿತಿಯನ್ನು ಪರಿಶೀಲಿಸಲು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯ, ಸೋಂಕಿತರ ಚಿಕಿತ್ಸೆಗೆ ತಯಾರಿ, ಆಕ್ಸಿಜನ್ ಪೂರೈಕೆ, ವೈದ್ಯರು, ನಿರ್ಸ್ ಸೇರಿ ಕೋವಿಡ್ ವಾರಿಯರ್ ಲಭ್ಯತೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಅದೇ ವೇಳೆ ಚೀನಾ, ಬ್ರೆಜಿಲ್, ಜಪಾನ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸೃಷ್ಟಿಯಾಗಿರುವ ಕೋವಿಡ್ ಅಲೆಯಿಂದ ಭಾರತಕ್ಕಿರುವ ಅಪಾಯ, ಭಾರತದಲ್ಲಿ ಸೃಷ್ಟಿಯಾಗಬಲ್ಲ ಕೋವಿಡ್ ಅಲೆ, ಪ್ರಕರಣ ಸಂಖ್ಯೆ, ಗಂಭೀರತೆ ಕುರಿತು ಚರ್ಚೆ ನಡೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!