ಹೊಸ ವರ್ಷ ಸ್ವಾಗತಿಸಲು ಸಜ್ಜಾಗುತ್ತಿದೆ ಸಿಲಿಕಾನ್ ಸಿಟಿ: ಕಿಕ್ಕಿರಿದು ಸೇರಿದ ಜನತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ಕ್ಕೆ ಸ್ವಾಗತಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿಸಿದ್ದು, ರಾಜ್ಯ ರಾಜಧಾನಿಯಲ್ಲಿ ಸಂಭ್ರಮ ಮನೆ ಮಾಡಿದೆ.

ಎಲ್ಲೆಡೆ 12 ಗಂಟೆ ಆಗಲು ಕಾಯುತ್ತಿದ್ದು, ರಸ್ತೆಗಳಲ್ಲೇ ಜೊತೆ ಸೇರಿ ನಲಿದು ಕುಣಿದು ಕುಪ್ಪಳಿಸುತ್ತಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳು ಯುವ ಸಮೂಹದಿಂದ ಕಿಕ್ಕಿರಿಯುತ್ತಿವೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗಳು ಕಲರ್‌ಫುಲ್ ಆಗಿವೆ. ಮುಂಜಾಗ್ರತಾ ಕ್ರಮವಾಗಿ 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಈಗಾಗಲೇ ಇಂದಿರಾನಗರ ಚರ್ಚ್ ಸ್ಟ್ರೀಟ್ ಬಂದ್ ಆಗಿದ್ದು, ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಬ್‍ಗಳು ಭರ್ತಿಯಾಗಿದ್ದು, ಪಬ್‍ಗಳು ಹೊಸ ವರ್ಷದ ಪಾರ್ಟಿಗೆ ದರ ಹೆಚ್ಚಿಸಿದೆ.

ಸಿಸಿಟಿವಿಗಳ ಕಣ್ಗಾವಲು, ಆರೆಂಜ್ ಸ್ಕ್ವಾಡ್ ಕೂಡ ಇದೆ. ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ನಸುಕಿನಜಾವ 2 ಗಂಟೆಯವರೆಗೂ ಮೆಟ್ರೋ ಸೇವೆ ಇರಲಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಏರ್‌ಪೋರ್ಟ್ ಮೇಲ್ಸೇತುವೆ ಹೊರತುಪಡಿಸಿ ಉಳಿದೆಲ್ಲಾ ಫ್ಲೈಓವರ್ ಬಂದ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!