BIG NEWS | ಭಾರತದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಗೆ DCGI ಅನುಮೋದನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ್ ಬಯೋಟೆಕ್‌ನ ಮೊದಲ ಇಂಟ್ರಾನಾಸಲ್ (ಮೂಗಿನ ಮೂಲಕ ಲಸಿಕೆ ನೀಡುವ ವಿಧಾನ) ಕೋವಿಡ್ ಲಸಿಕೆಗೆ ಡಿಸಿಜಿಐ ಅನುಮೋದನೆ ನೀಡಿದೆ.

ಭಾರತದ ಇದು ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಯಾಗಿದ್ದು, ಇದನ್ನು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಇದನ್ನ ‘ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ದೊಡ್ಡ ಉತ್ತೇಜನ’ ಎಂದು ಕರೆದಿದ್ದಾರೆ.

ಭಾರತ್ ಬಯೋಟೆಕ್ನ SARS-CoV-S ಕೋವಿಡ್-19 (ಚಿಂಪಾಂಜಿ ಅಡೆನೊವೈರಸ್ ವೆಕ್ಟರ್ಡ್) ಮರುಸಂಯೋಜಿತ ಮೂಗಿನ ಲಸಿಕೆಯನ್ನ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ 18+ ವಯೋಮಾನದವರಲ್ಲಿ ಪ್ರಾಥಮಿಕ ರೋಗನಿರೋಧಕತೆಗಾಗಿ ಸಿಡಿಎಸ್‌ಸಿಒ ಅನುಮೋದಿಸಿದೆ.

ಭಾರತ್ ಬಯೋಟೆಕ್ ಇಂಟ್ರಾನಾಸಲ್ ಕೋವಿಡ್ -19 ಲಸಿಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( DCGI) ನಿಂದ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!