BIG NEWS | ದೆಹಲಿ ಏರ್ ರ್ಪೋರ್ಟ್ ನಲ್ಲಿ ತಪ್ಪಿದ ಭಾರೀ ಅವಘಡ: ಆತಂಕ ಹುಟ್ಟಿಸಿತು ‘ವಿಸ್ತಾರಾ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ಯಾಂಕಾಕ್‌ನಿಂದ ದೆಹಲಿಗೆ ಬಂದಿಳಿದ ವಿಸ್ತಾರಾ ವಿಮಾನದ ಎಂಜಿನ್ ಕೈಕೊಟ್ಟಿದೆ. ಈ ವೇಳೆ ವಿಮಾನವನ್ನು ಟ್ಯಾಕ್ಸಿವೇಯಿಂದ ಪಾರ್ಕಿಂಗ್ ಪ್ರದೇಶಕ್ಕೆ ಎಳೆದುಕೊಂಡು ಹೋಗಲಾಗಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ.

ವಿಮಾನ ಯುಕೆ-122 ಸಿಂಗಲ್ ಇಂಜಿನ್‌ನಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಣ್ಣ ದೋಷವೊಂದು ಕಂಡುಬಂದಿತ್ತು. ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ವಿಮಾನವನ್ನು ಸುರಕ್ಷಿತ ಸ್ಥಳಕ್ಕೆ ಎಳೆದೊಯ್ಯಲಾಗಿದೆ ಎಂದು ವಿಸ್ತಾರಾ ಏರ್​ಲೈನ್ಸ್ ತಿಳಿಸಿದೆ.ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದೂ ಸಹ ವಿಸ್ತಾರ ಸಂಸ್ಥೆ ಮಾಹಿತಿ ನೀಡಿದೆ. ಈ ಘಟನೆಯ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್​ಗೆ (ಎಟಿಸಿ) ಮಾಹಿತಿ ನೀಡಲಾಯಿತು. ಆನಂತರ ವಿಮಾನವನ್ನು ಪಾರ್ಕಿಂಗ್ ಬೇಗೆ ಎಳೆಯಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!