ಸತತ ಮಳೆಗೆ ನಡುಗಿದ ಹಿಮಾಚಲ: ಅವಶೇಷಗಳಡಿ ಸಿಲುಕಿ ರಕ್ಷಣೆಗಾಗಿ ಹಾ ತೊರೆಯಿತು ಕೈ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಮಾಚಲ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಅನೇಕ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ. ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ನೂರಾರು ಮಂದಿ ನಿರ್ಗತಿಕರಾಗಿದ್ದಾರೆ.
ಇತ್ತ ಧಾರಾಕಾರ ಮಳೆಯಿಂದಾಗಿ ಶಿಮ್ಲಾದ ಸಂಜೌಲಿ ಮುಂಭಾಗದ ಧಾಲಿ ಸುರಂಗದ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ ರಸ್ತೆ ಮೇಲೆ ಮಲಗಿದ್ದ ಮೂವರು ಬಾಲಕಿಯರು ಅವಶೇಷಗಳಡಿ ಸಿಲುಕಿಕೊಂಡಿ, ಬಾಲಕಿಯೊಬ್ಬಳು ರಕ್ಷಣೆಗೋಸ್ಕರ ಹಾತೊರೆಯುತ್ತಿರುವ ವಿಡಿಯೋ ವೈರಲ್​ ಆಗಿದೆ.

 

ಕಲ್ಲಿನ ಕೆಳಗೆ ಸಿಲುಕಿಕೊಂಡಿರುವ ಬಾಲಕಿ ತನ್ನ ಪ್ರಾಣ ರಕ್ಷಣೆ ಮಾಡುವಂತೆ ಕೈ ಬೀಸಿ ಬೇಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಘಟನೆಯಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಚಿಕಿತ್ಸೆಗೋಸ್ಕರ ಐಜಿಎಂಸಿಗೆ ದಾಖಲು ಮಾಡಲಾಗಿದೆ.
ರಸ್ತೆ ಬದಿಯಲ್ಲಿ ಕುಟುಂಬವೊಂದು ಟೆಂಟ್​ ಹಾಕಿಕೊಂಡು ಜೀವನ ನಡೆಸುತ್ತಿತ್ತು. ಭೂಕುಸಿತ ಉಂಟಾಗಿರುವ ಕಾರಣ ಮೂವರು ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡಿದ್ದರು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ,ಇಬ್ಬರ ಪ್ರಾಣ ಉಳಿಸಲಾಗಿದೆ. ನಿರಂತರ ಮಳೆಯಿಂದಾಗಿ ಮಣಿಕರ್ನ್​ ಪ್ರದೇಶದಲ್ಲಿ ಮೇಘ ಸ್ಫೋಟ ಉಂಟಾಗಿದ್ದು, 6 ಜನರು ನಾಪತ್ತೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!