BIG NEWS | ಮೊಹಮ್ಮದ್ ಖಾಸಿಮ್ ಗುಜ್ಜರ್ ಭಯೋತ್ಪಾದಕ: ಕೇಂದ್ರ ಗೃಹ ಸಚಿವಾಲಯ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಗೃಹ ಸಚಿವಾಲಯ ಲಷ್ಕರ್ ಇ ತೈಬಾ ಸದಸ್ಯ ಮೊಹಮ್ಮದ್ ಖಾಸಿಮ್ ಗುಜ್ಜರ್ ಭಯೋತ್ಪಾದಕ ಎಂದು ಘೋಷಿಸಿದೆ.

ಈ ಕುರಿತು ಕೇಂದ್ರ ಗೃಹ ಸಚಿವಾಲಯ ಪ್ರಕಣೆ ಹೊರಡಿಸಿದ್ದು, ಭಯೋತ್ಪಾದನೆಯನ್ನು ಮೋದಿ ಸರ್ಕಾರ ಎಳ್ಳಷ್ಟು ಸಹಿಸುವುದಿಲ್ಲ. ಭಾರತದಲ್ಲಿ ನಡೆದ ಹಲವು ಉಗ್ರದಾಳಿಯಲ್ಲಿ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿರುವ ಮೊಹಮ್ಮದ್ ಖಾಸಿಮ್ ಗುಜ್ಜರ್ ಭಯೋತ್ಪಾದಕ ಎಂದು ಗೃಹ ಸಚಿವಾಲಯ ಘೋಷಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿ ತನಿಖೆಯಲ್ಲಿ ಪ್ರಮುಖವಾಗಿ ಮೊಹಮ್ಮದ್ ಖಾಸಿಮ್ ಗುಜ್ಜರ್ ಹೆಸರು ಕೇಳಿಬಂದಿದೆ. ಭಯೋತ್ಪಾದನಾ ದಾಳಿಗೆ ಹಣಕಾಸು ನೆರವು, ಡ್ರೋನ್ ನೆರವು, ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಹಲವು ರೀತಿಯಲ್ಲಿ ಗುಜ್ಜರ್ ನೆರವಾಗಿದ್ದಾನೆ. ನೇರವಾಗಿ ಉಗ್ರ ಕೃತ್ಯಗಳಲ್ಲಿ ಕಾಣಿಸಿಕೊಳ್ಳದ ಗುಜ್ಜರ್, ತೆರೆಮರೆಯಲ್ಲಿ ದಾಳಿಯ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿರುವುದು ಪತ್ತೆಯಾಗಿದೆ.

ಭಾರತದ ಸಾರ್ವಭೌಮತ್ವ, ಏಕತೆಗೆ ಧಕ್ಕೆ ತರುವ ಯಾವುದೇ ಶಕ್ತಿಯನ್ನು ಭಾರತ ಸಹಿಸುವುದಿಲ್ಲ. ಅಂತರವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಮಿತ್ ಶಾ ಘೋಷಿಸಿದ್ದಾರೆ.

ಮೊಹಮ್ಮದ್ ಖಾಸಿಮ್ ಗುಜ್ಜರ್, ಗಡಿಯೊಳಗೆ ನಡೆದಿರುವ ಹಲವು ಕೃತ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿದ್ದಾರೆ. ಉಗ್ರರಿಗೆ ಹಣಕಾಸಿನ ನರೆವು, ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಸ್ಫೋಟಗಳ ಪೂರೈಕೆಯನ್ನು ಈತ ಮಾಡಿದ್ದಾರೆ. ದೇಶದಲ್ಲಿನ ಭಯೋತ್ಪಾದಕ ಕೃತ್ಯಕ್ಕೆ ಪ್ಲಾನ್ ರೂಪಿಸಿದ್ದಾನೆ. ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಭಯೋತ್ಪಾದಕ ಸಂಘಟನೆಗೆ ನೇಮಕ ಮಾಡುವುದು, ಯುವಕರಿಗೆ ಹಣದ ಆಮಿಷ ನೀಡಿ ಉಗ್ರ ಕೃತ್ಯಕ್ಕೆ ಬಳಸಿಕೊಳ್ಳುವುದನ್ನು ಈತ ಮಾಡಿದ್ದಾನೆ.

32 ವರ್ಷದ ಮೊಹಮ್ಮದ್ ಖಾಸಿಮ್ ಗುಜ್ಜರ್ ಜಮ್ಮು ಮತ್ತು ಕಾಶ್ಮೀರದ ರೆಸಾಯಿ ಜಿಲ್ಲೆಯವನಾಗಿದ್ದು, ಕಾಶ್ಮೀರದ ಬಹುತೇಕ ಕಡೆಗಳಲ್ಲಿನ ಉಗ್ರ ದಾಳಿಯಲ್ಲಿ ತೆರೆ ಮೆರೆಯಲ್ಲಿ ಕೆಲಸ ಮಾಡಿದ್ದಾನೆ. ಭಾರತೀಯ ಸೇನೆಯ ಕಣ್ತಪ್ಪಿಸಿಕೊಂಡಿರುವ ಈತ ಪಾಕಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಲೆಸಿದ್ದಾನೆ. ಭಾರತೀಯ ಸೇನೆ ಮೇಲೆ ನಡೆದ ಹಲವು ಭಯೋತ್ಪಾದನಾ ಕೃತ್ಯಕ್ಕೆ ಹಲವು ಮಾಹಿತಿ ನೀಡಿ ದಾಳಿಯನ್ನು ಯಶಸ್ವಿಗೊಳಿಸಿದ ಮೊಹಮ್ಮದ್ ಖಾಸಿಮ್ ಗುಜ್ಜಾರ್ ಉಗ್ರ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!