ಬೆಂಗಳೂರಿನ ಖಾಸಗಿ ನೀರಿನ ಟ್ಯಾಂಕರ್‌ಗೆ ಸರಕಾರದಿಂದ ಬೆಲೆ ನಿಗದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಪ್ರತ್ಯೇಕ ಯೋಜನೆ ಮಾಡದ ಹಿನ್ನೆಲೆಯಲ್ಲಿ ನೀರಿಗಾಗಿ ಜನರು ಹಾಹಾಕಾರ ಅನುಭವಿಸುತ್ತಿದ್ದಾರೆ.

ಇದೀಗ ಖಾಸಗಿ ಟ್ಯಾಂಕರ್‌ಗಳನ್ನು ಸುಪರ್ದಿಗೆ ಪಡೆದುಕೊಂಡಿರುವ ಸರ್ಕಾರ ಟ್ಯಾಂಕರ್‌ಗಳ ನೀಡುವ ಸರಬರಾಜಿಗೆ ಕೇವಲ 600 ರೂ. ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭದಲ್ಲಿಯೇ ಜಲಕಂಟಕ ಎದುರಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಖಾಸಗಿ ನೀರಿನ ಟ್ಯಾಂಕರ್ ಮಾಲೀಕರು ಒಂದು ಟ್ಯಾಂಕರ್‌ಗೆ ಬರೋಬ್ಬರಿ 2,000 ರೂ. ದರವನ್ನು ನಿಗದಿಗೊಳಿಸಿ ಜನರನ್ನು ಸುಲಿಗೆ ಮಾಡಲು ಮುಂದಾಗಿದ್ದಾರೆ.

ಇನ್ನು ನೀರಿನ ಟ್ಯಾಂಕರ್‌ ಹಾಕಿಸಿಕೊಂಡು ಜೀವನ ಮಾಡುತ್ತಿರುವ ಜನರು ಹೆಚ್ಚು ಹಣವನ್ನು ಪಾವತಿಸಲಾಗದೇ ಸರ್ಕಾರದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಖಾಸಗಿ ಟ್ಯಾಂಕರ್‌ಗಳನ್ನು ನೋಂದಣಿ ಮಾಡಿಸಿಕೊಂಡ ಸರ್ಕಾರದಿಂದ ಈಗ ನೀರಿನ ಟ್ಯಾಂಕರ್‌ಗೆ ದರವನ್ನೂ ನಿಗದಿ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದಿಂದ ನಿಗದಿಗೊಳಿಸಲಾದ ದರಕ್ಕಿಂತ ಹೆಚ್ಚಿನ ದರವನ್ನು ಪಡಟೆದುಕೊಂಡಲ್ಲಿ ಅಂತಹ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ, ನೋಂದಣಿ ಮಾಡಿಸದ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯುವುದಾಗಿ ಸರ್ಕಾರದಿಂದ ಖಡಕ್ ಸಂದೇಶ ರವಾನಿಸಲಾಗಿದೆ.

ರಾಜಧಾನಿಯಲ್ಲಿ ವಾಟರ್ ಟ್ಯಾಂಕರ್ ಮಾಲೀಕರ ಲೂಟಿಗೆ ಕಡಿವಾಣ ಹಾಕುವಂತೆ ಜಲಮಂಡಳಿ, ಬಿಬಿಎಂಪಿ ವತಿಯಿಂದ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಈ ಸಂಬಂಧ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಖಾಸಗಿ ಟ್ಯಾಂಕರ್ ಗಳಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ. ಮಾರ್ಚ್‌ ತಿಂಗಳಿಂದ ಜೂನ್ ತಿಂಗಳವರೆಗೆ (4 ತಿಂಗಳು) 200 ಖಾಸಗಿ ಟ್ಯಾಂಕರ್‌ಗಳಿಗೆ ಸೂಕ್ತ ದರ ನಿಗದಿಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾಡಳಿತದಿಂದ ಖಾಸಗಿ ನೀರಿನ ಟ್ಯಾಂಕರ್‌ಗೆ ನಿಗದಿಗೊಳಿಸಿದ ದರಗಳ ವಿವರ:

100 ಮೀಟರ್‌ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ನೀರಿ ಸರಬರಾಜಿಗೆ ದರ
ಟ್ಯಾಂಕರ್‌ಗಳು ಕ್ಯಾಪಾಸಿಟಿ ನಿಗದಿಪಡಿಸಿದ ದರ
6000 ಲೀ. ನೀರಿನ ಟ್ಯಾಂಕರ್ 600 ರೂಪಾಯಿ
8000 ಲೀ. ನೀರಿನ ಟ್ಯಾಂಕರ್ 700 ರೂಪಾಯಿ
12,000 ಲೀ ವಾಟರ್ ಟ್ಯಾಂಕರ್ 1,000 ರೂಪಾಯಿ

5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ನೀರು ಸರಬರಾಜಿಗೆ ದರ:
6000 ಲೀ. ನೀರಿನ ಟ್ಯಾಂಕರ್ 750 ರೂಪಾಯಿ
8000 ಲೀ. ನೀರಿನ ಟ್ಯಾಂಕರ್ 850 ರೂಪಾಯಿ
12,000 ಲೀ ವಾಟರ್ ಟ್ಯಾಂಕರ್ 1,200 ರೂಪಾಯಿ

ಇನ್ನು 8,000 ಲೀ.ನಿಂದ 12,000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್‌ಗಳು 10 ಕಿ.ಮೀ.ಗಿಂತ ದೂರವಿದ್ದಲ್ಲಿ ಪ್ರತಿ ಕಿ.ಮೀಗೆ ತಲಾ 50 ರೂ. ಹೆಚ್ಚುವರಿಯಾಗಿ ಹಣ ನೀಡುವಂತೆ ಆದೇಶ ಹೊರಡಿಸಲಾಗಿದೆ.

ಇನ್ನು ಜಿಲ್ಲಾಡಳಿತದಿಂದ ನಿಗದಿ ಮಾಡಲಾದ ನೀರಿನ ಟ್ಯಾಂಕರ್‌ಗಳ ದರದಲ್ಲಿ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಒಳಗಗೊಂಡಿದೆ. ಇನ್ನು ಈ ದರವನ್ನು ಲೋಕೋಪಯೋಗಿ ಇಲಾಖೆ ಎಸ್‌ಆರ್‌ ದರಗಳು ಹಾಗೂ ವಾಸ್ತವಿಕವಾಗಿ ನೀರನ್ನು ಪೂರೈಕೆ ಮಾಡಲು ಎಷ್ಟು ದರವಿದೆ ಎಂಬ ಅಂಶಗಳನ್ನು ಆಧರಿಸಿ ಸಮಗ್ರವಾಗಿ ಅವಲೋಕಿಸಿ ದವರನ್ನು ನಿಗದಿ ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಆದೇಶ ಉಲ್ಲಂಘನೆಯಾಗಿ ಜನರು ಸಂಕಷ್ಟ ಅನುಭವಿಸದಂತೆ ಜಾಗರೂಕತೆ ವಹಿಸಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!