BIG NEWS | ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲು

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮಧ್ಯಪ್ರದೇಶದಲ್ಲಿ ರಾಣಿ ಕಮಲಾಪತಿ-ಸಹರ್ಸಾ ವಿಶೇಷ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ.

ಸಂಜೆ 6:10 ಕ್ಕೆ ರೈಲು ಇಟಾರ್ಸಿ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರೈಲು ಪ್ಲಾಟ್ ಫಾರ್ಮ್ ಸಂಖ್ಯೆ 2 ಅನ್ನು ಪ್ರವೇಶಿಸುತ್ತಿದ್ದಾಗ ಅದರ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿ ತಪ್ಪಿದಾಗ ರೈಲು 5 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರಿಂದ ಸಂಭವನೀಯ ದುರಂತ ತಪ್ಪಿದೆ. ಅಪಘಾತ ಸಂಭವಿಸಿದ ಎರಡೂವರೆ ಗಂಟೆಗಳ ನಂತರವೂ ರೈಲು ಹೋಶಂಗಾಬಾದ್ ಜಿಲ್ಲೆಯ ಇಟಾರ್ಸಿ ಜಂಕ್ಷನ್ನಲ್ಲಿ ನಿಂತಿತ್ತು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!