ಮೇಷ
ಭಾವನೆಗಳು ನಿಮ್ಮ ಮೇಲೆ ಸವಾರಿ ಮಾಡಲು ಬಿಡಬೇಡಿ. ಈರ್ಷ್ಯೆಯಿಂದ ಸಂಬಂಧ ಕೆಡಬಹುದು. ಅಧಿಕ ಖರ್ಚಿನಿಂದಾಗಿ ಆರ್ಥಿಕ ಒತ್ತಡ ಹೆಚ್ಚು.
ವೃಷಭ
ನೀವಿಂದು ಹೆಚ್ಚು ಚಟುವಟಿಕೆಯಿಂದ ಕಾರ್ಯಾಚರಿಸುವಿರಿ. ಕೆಲವು ಬೆಳವಣಿಗೆ ನಿಮ್ಮನ್ನು ಪ್ರತಿಕ್ಷಣ ಕಾರ್ಯತತ್ಪರರನ್ನಾಗಿ ಮಾಡುತ್ತದೆ.
ಮಿಥುನ
ಮನೆ , ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚು. ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಮನಸ್ಸಿಗೆ ಖುಷಿ ಕೊಡುವ ಬೆಳವಣಿಗೆ ಸಂಭವಿಸುವುದು.
ಕಟಕ
ಭಾವನಾತ್ಮಕ ಏರುಪೇರು. ಹಳೆಯ ವಿಷಯಗಳು ಮುನ್ನೆಲೆಗೆ ಬರುತ್ತವೆ. ಪ್ರೀತಿಪಾತ್ರರ ವಿಶ್ವಾಸ ಗಳಿಸುವಿರಿ. ಆರ್ಥಿಕವಾಗಿ ಲಾಭಕರ ಬೆಳವಣಿಗೆ.
ಸಿಂಹ
ಎಲ್ಲರೊಂದಿಗೆ ಇಂದು ಸೌಹಾರ್ದದಿಂದ ವರ್ತಿಸಿ. ಭಿನ್ನಮತವನ್ನು ನಿವಾರಿಸಿಕೊಳ್ಳಿ. ವಿವಾದವು ತಾರಕಕ್ಕೆ ಏರಲು ಅವಕಾಶ ಕೊಡಬೇಡಿ.
ಕನ್ಯಾ
ಹಣಕಾಸಿಗೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ ಪಡೆಯುವಿರಿ. ದೈಹಿಕ ನೋವು ನಿವಾರಣೆ. ಮಾನಸಿಕ ನಿರಾಳತೆ.
ತುಲಾ
ಯಾವುದೇ ಬೆಳವಣಿಗೆ ಇಂದು ನಿಮಗೆ ಅನುಕೂಲವನ್ನೆ ತರುವುದು. ಪ್ರತಿಕೂಲ ಸನ್ನಿವೇಶ ಉಂಟಾದರೂ ಅದು ಬಳಿಕ ನೆಮ್ಮದಿಗೆ ಕಾರಣವಾಗಲಿದೆ.
ವೃಶ್ಚಿಕ
ಗುರಿ ಸಾಧನೆಗೆ ಅನುಕೂಲ ದಿನ. ಇತರರ ಜತೆ ಸೌಹಾರ್ದದಿಂದ ವರ್ತಿಸಿ. ಆರ್ಥಿಕವಾಗಿ ನಿಮಗೆ ಪೂರಕ ಬೆಳವಣಿಗೆ. ದೈಹಿಕ ಸುಸ್ತು ನಿವಾರಣೆ.
ಧನು
ಸಂತೋಷದ ದಿನ. ಈ ದಿನ ಏನು ಸಾಧಿಸಬೇಕೆಂದು ಇಚ್ಛಿಸುತ್ತೀರೋ ಅದನ್ನು ಸಾಧಿಸುವಿರಿ. ಎಲ್ಲರಿಂದ ಉತ್ತಮ ಸಹಕಾರ. ಕೌಟುಂಬಿಕ ನೆಮ್ಮದಿ.
ಮಕರ
ಎಲ್ಲ ಕ್ಷೇತ್ರಗಳಲ್ಲಿ ಇಂದು ಯಶಸ್ಸು. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂಜರಿಕೆ ಬೇಡ. ಹಿಂದಿನ ಹೂಡಿಕೆಗಳಿಂದ ಧನಲಾಭ.
ಕುಂಭ
ಉಲ್ಲಸಿತ ಮನಸ್ಥಿತಿ. ಏನನ್ನೋ ಸಾಧಿಸಿದ ತೃಪ್ತಿ. ಕೌಟುಂಬಿಕ ಸಮಸ್ಯೆ ಪರಿಹಾರವಾಗಿ ನಿರಾಳತೆ. ಆರ್ಥಿಕ ಬಿಕ್ಕಟ್ಟು ಕೂಡಾ ಪರಿಹಾರ ಕಾಣುವುದು.
ಮೀನ
ನಿಮ್ಮ ದಿನವು ನಿರುತ್ಸಾಹದಿಂದ ಆರಂಭವಾದರೂ ಬಳಿಕ ಸಂತೋಷ ತುಂಬುವ ಬೆಳವಣಿಗೆ. ಖಾಸಗಿ ಸಮಸ್ಯೆಯೊಂದು ಪರಿಹಾರ ಕಾಣಲಿದೆ.