BIG NEWS | ವಿಶ್ವ ಚಾಂಪಿಯನ್​ಶಿಪ್: 32 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಗರಿ ಮುಡಿಸಿದ 16ರ ಪೋರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಭಾರತದ ಯುವ ಕುಸ್ತಿಪಟು ಸೂರಜ್​​​ ಐತಿಹಾಸಿಕ ಸಾಧನೆ ಮಾಡಿದ್ದಾರೆ.
55 ಕೆಜಿ ವೈಟ್​ ಕ್ಲಾಸ್​ ಕುಸ್ತಿ ವಿಭಾಗದಲ್ಲಿ ಭಾರತದ ಸೂರಜ್​​ ವಸಿಷ್ಟ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಬರೋಬ್ಬರಿ 32 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.

ಗ್ರಿಕೋ – ರೋಮನ್​ U-17 ವಿಶ್ವ ಚಾಂಪಿಯನ್​ಶಿಪ್​ನಲ್ಲಿ16 ವರ್ಷದ ಸೂರಜ್ 55kg ವೈಟ್ ಕ್ಲಾಸ್ ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್ ಫರಿಮಾ ಮುಸ್ತಫೆವ್ ಅವರನ್ನು 11-0 ಅಂತರದಿಂದ ಸೋಲಿಸಿ ವಿಶೇಷ ಸಾಧನೆ ಮಾಡಿ ಮೆರೆದಿದ್ದಾರೆ.

ಹರಿಯಾಣದ ರೋಹ್ಟಕ್ ಜಿಲ್ಲೆಯ ರಿತಾಲ್​ನ ಸೂರಜ್​ ಫೈನಲ್​ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆರಂಭದಿಂದಲೂ ಎದುರಾಳಿ ಮೇಲೆ ಹಿಡಿತ ಸಾಧಿಸಿ, ಯಾವುದೇ ಪಾಯಿಂಟ್ ಬಿಟ್ಟುಕೊಡಲಿಲ್ಲ. ಹೀಗಾಗಿ, ಎರಡು ಸುತ್ತಿನಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!