ಹೊಸದಿಗಂತ ವರದಿ,ಬೀದರ್ :
ಬೀದರ ಜಿಲ್ಲಾ ಪೊಲೀಸರು 47 ಲಕ್ಷ 5 ಸಾವಿರ ರೂಪಾಯಿ ಮೌಲ್ಯದ 47 ಕೆ.ಜಿ. 7 ಗ್ರಾಂ ಅಕ್ರಮ ಗಾಂಜಾ ಜಪ್ತಿ, ನಾಲ್ವರು ಆರೋಪಿಗಳ ಬಂಧಿಸಿದ್ದಾರೆ .
ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಕವಾಯಿತು ಮೈದಾನದಲ್ಲಿ ಅಕ್ಟೋಬರ್ 12 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಲಂಗೋಟಿ ಅವರು, ಅಕ್ಟೋಬರ್ 11 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನನ್ನ ಹಾಗೂ ಎ.ಎಸ್.ಪಿ. ಮಹೇಶ ಮೇಘಣ್ಣನವರ, ಭಾಲ್ಕಿ ಎ.ಎಸ್.ಪಿ. ಶಿವಾನಂದ ಪವಾಡ ಶೆಟ್ಟಿಯವರ ಮಾರ್ಗದರ್ಶನಲ್ಲಿ ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಗ್ರಾಮೀಣ ವೃತ್ತ ಸಿ.ಪಿ.ಐ. ಗುರುಪಾದ ಎಸ್. ಬಿರಾದಾರ ಮತ್ತು ಧನ್ನೂರ ಪೊಲೀಸ್ ಠಾಣೆಯ ಕ್ರೈಂ ಪಿ.ಎಸ್.ಐ. ವಿಶ್ವರಾಧ್ಯ ಪಿ.ಎಸ್. ಮತ್ತು ಪಿ.ಎಸ್.ಐ. ವೀರಶೆಟ್ಟಿ ಪಾಟೀಲರು ಹಾಗೂ ಸಿಬ್ಬಂದಿಗಳು ಒಟ್ಟು 47 ಲಕ್ಷ 5 ಸಾವಿರ ರೂಪಾಯಿ ಮೌಲ್ಯದ 47 ಕೆ.ಜಿ. 7 ಗ್ರಾಮ ಗಾಂಜಾ ವಶಪಿಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.
ಬೀದರ ನಗರದಲ್ಲಿ ಅಕ್ಟೋಬರ್ 12 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಲಂಗೋಟಿ ಅವರು, ಅಕ್ಟೋಬರ್ 11 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ತೇಲಂಗಾಣದಿಂದ ಮಹಾರಾಷ್ಟ್ರಕ್ಕೆ ಸಾಗಾಣೆ ಮಾಡುತ್ತಿದ್ದ ಕೆ.ಎ. -28, ಎಮ್-8146 ಸಂಖ್ಯೆ ಟಾಟಾ ಇಂಡಿಕಾ ವಿಸ್ಟಾ ಕಾರ ತಡೆದು ಪರಿಶೀಲಿಸಿದಾಗ, 25 ಲಕ್ಷ 65 ಸಾವಿರ ರೂಪಾಯಿ ಮೌಲ್ಯದ 25 ಕೆ.ಜಿ. 65 ಗ್ರಾಂ ಗಾಂಜಾ ವಶಪಡಿಸಿಕೊಂಡು ಮೂವರನ್ನು ಬಂಧಿಸಲಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. 7 ಜನ ಆರೊಪಿಗಳ ಪೈಕಿ 5 ಜನರು ಧನ್ನೂರಾ ಗ್ರಾಮದವರಾಗಿದ್ದು, ಇನ್ನಿಬ್ಬರು ಬೀದರ ನಗರದವರಾಗಿದ್ದಾರೆ ಎಂದು ಹೇಳಿದರು.
ಬಂಧಿತ ಆರೋಪಿಗಳನ್ನು ವಿಚಾರಣೆಗೊಳಡಿಸಿದಾಗ, ಮೂರು ಬೈಕ್ ಕಳ್ಳತನ ಹಾಗೂ ಒಂದು ಮನೆ ಕಳ್ಳತನ ಪ್ರಕರಣದಲ್ಲಿಯೂ ಶಾಮೀಲಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ಮಾಡಿದಾಗ, ಆರೊಪಿಗಳು ಬೀದರ ನಗರದ ಶಹಾಪೂರ ಗೇಟ್ ಬಳಿ ಇರುವ ಬಾಡಿಗೆ ಮನೆ ಪರಿಶೀಲಿಸಿದಾಗ, ಆಂಧ್ರ ಮತ್ತು ತೇಲಂಗಾಣದಿಂದ ತಂದಿರುವ ಗಾಂಜಾವನ್ನು ಬಾಡಿಗೆ ಮನೆಯಲ್ಲಿ ಸಂಗ್ರಹಿಸಿ, ಸಮಯ ನೋಡಿಕೊಂಡು ಮಹಾರಾಷ್ಟ್ರಕ್ಕೆ ಸಾಗಾಣೆ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದರು.
ಬಾಡಿಗೆ ಮನೆಯಲ್ಲಿಯೂ ಸಂಗ್ರಹಿಸಿ ಇಟ್ಟಿದ 21 ಲಕ್ಷ 40 ಸಾವಿರ ರೂಪಾಯಿ ಮೌಲ್ಯದ 21 ಕೆ.ಜಿ. 44 ಗ್ರಾಮ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಪ್ರಕರಣ ಪತ್ತೆ ಹಚ್ಚುವಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಭಿನಂದಿಸಿ, ಪ್ರಶಂಸನೀಯ ಪತ್ರ ನೀಡಿ, ಗೌರವಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಲ್ಕಿ ಎ.ಎಸ್.ಪಿ. ಶಿವಾನಂದ, ಭಾಲ್ಕಿ ಗ್ರಾಮೀಣ ವೃತ್ತ ಸಿ.ಪಿ.ಐ. ಗುರುಪಾದ ಬಿರಾದಾರ ಹಾಗೂ ಭಾಲ್ಕಿ ತಾಲೂಕಿನ ಧನ್ನೂರಾ ಪೊಲೀಸ್ ಠಾಣೆ ಪಿ.ಎಸ್.ಐ. ಮತ್ತು ಸಿಬ್ಬಂದಿಗಳು ಇದ್ದರು.