July 28, 2026
Tuesday, July 28, 2026
spot_img

ಕೈಗಾರಿಕೋದ್ಯಮಿಗಳಿಗೆ ಬಿಗ್ ರಿಲೀಫ್: ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಕಸ್ಟಮ್ಸ್ ಸುಂಕ ಮನ್ನಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾದ ವ್ಯತ್ಯಯದ ನಡುವೆ, ಕೇಂದ್ರ ಸರ್ಕಾರ ಮಹತ್ವದ ಆರ್ಥಿಕ ನಿರ್ಧಾರ ಕೈಗೊಂಡಿದೆ.

ದೇಶೀಯ ಕೈಗಾರಿಕೆಗಳ ಮೇಲಿನ ವೆಚ್ಚದ ಒತ್ತಡ ಕಡಿಮೆ ಮಾಡಲು ಆಯ್ದ ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ತಾತ್ಕಾಲಿಕವಾಗಿ ಸಂಪೂರ್ಣ ರದ್ದುಗೊಳಿಸಲಾಗಿದೆ. ಈ ಕ್ರಮ ಏಪ್ರಿಲ್ 2ರಿಂದ ಜೂನ್ 30ರವರೆಗೆ ಜಾರಿಯಲ್ಲಿರಲಿದೆ.

ಸರ್ಕಾರದ ಈ ನಿರ್ಧಾರದಿಂದ ಮೆಥನಾಲ್, ಟೊಲ್ಯೂನ್, ಸ್ಟೈರಿನ್, ಅಸಿಟಿಕ್ ಆಸಿಡ್, ಪಿವಿಸಿ, ಪಾಲಿಥಿಲಿನ್ ಸೇರಿದಂತೆ ಸುಮಾರು 40 ಪ್ರಮುಖ ಉತ್ಪನ್ನಗಳು ಶೂನ್ಯ ಸುಂಕದ ಅಡಿಯಲ್ಲಿ ಬರುತ್ತವೆ. ಜೊತೆಗೆ ಅಮೋನಿಯಂ ನೈಟ್ರೇಟ್ ಮೇಲಿನ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಕೂಡ ಶೂನ್ಯಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ:

ಈ ನಿರ್ಧಾರದಿಂದ ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧ, ರಸಾಯನ ಹಾಗೂ ಆಟೋಮೊಬೈಲ್ ಬಿಡಿಭಾಗ ತಯಾರಿಕಾ ವಲಯಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. ಕಚ್ಚಾ ವಸ್ತುಗಳ ಬೆಲೆ ಇಳಿಕೆಯಿಂದ ಅಂತಿಮ ಉತ್ಪನ್ನಗಳ ದರದಲ್ಲೂ ಇಳಿಕೆ ಕಾಣುವ ಸಾಧ್ಯತೆ ಇದೆ. ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಇದು ತಾತ್ಕಾಲಿಕ ರಿಲೀಫ್ ನೀಡುವ ಕ್ರಮವಾಗಿ ಪರಿಗಣಿಸಲಾಗಿದೆ.

ಆರ್ಥಿಕ ತಜ್ಞರ ಪ್ರಕಾರ, ಜಾಗತಿಕ ಅಸ್ಥಿರ ಪರಿಸ್ಥಿತಿಯಲ್ಲಿ ದೇಶೀಯ ಮಾರುಕಟ್ಟೆಯ ಬೆಲೆ ಸ್ಥಿರತೆ ಕಾಪಾಡಲು ಕೇಂದ್ರದ ಈ ಕ್ರಮ ಮಹತ್ವದ್ದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !