ಸಲ್ಮಾನ್‌ ಖಾನ್‌, ಸುಂದರ್‌ ಪಿಚೈ ಸೇರಿ 40 ಕೋಟಿ ಟ್ವಿಟ್ಟರ್‌ ಬಳಕೆದಾರರಿಗೆ ಬಿಗ್ ಶಾಕ್: ಡಾರ್ಕ್​ವೆ​ಬ್‌​ನಲ್ಲಿ ಮಾಹಿತಿ ಸೋರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ವಿಟ್ಟರ್‌ (Twitter) ಬಳ​ಕೆ​ದಾ​ರರ ವೈಯ​ಕ್ತಿಕ ಮಾಹಿ​ತಿಯು ಡಾರ್ಕ್​ವೆ​ಬ್‌​ನಲ್ಲಿ ಸೋರಿ​ಕೆ​ಯಾ​ಗಿದ್ದು, ಅದನ್ನು ಮಾರಾ​ಟ​ಕ್ಕಿ​ಡ​ಲಾ​ಗಿದೆ. ಹ್ಯಾಕರ್‌ ಈ ಮಾಹಿ​ತಿಯ ಮಾದ​ರಿ​ಯನ್ನುಸೈಟ್ಸ್‌​ನಲ್ಲಿ ಬಿಡು​ಗಡೆ ಮಾಡಿದ್ದು, ಮಾಹಿತಿ ಸೋರಿ​ಕೆ​ಯಾ​ಗಿದ್ದು ನಿಜ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ನೆ.

ಬಾಲಿ​ವುಡ್‌ ನಟ ಸಲ್ಮಾನ್‌ ಖಾನ್‌, ಗೂಗಲ್‌ ಸಿಇಒ ಸುಂದರ್‌ ಪಿಚೈ ಹಾಗೂ ಭಾರ​ತದ ಮಾಹಿತಿ ಮತ್ತು ಪ್ರಸಾರ ಸಚಿ​ವಾ​ಲ​ಯದ ಮಾಹಿತಿ ಕೂಡಾ ಸೋರಿ​ಕೆಯಾಗಿದೆ. ಇ-ಮೇಲ್‌ (E – Mail) , ಯೂಸ​ರ್‌​ನೇಮ್‌ (User Name), ಫಾಲೋ​ವರ್ಸ್‌ ಸಂಖ್ಯೆ, ಟ್ವಿಟ್ಟರ್‌ ಖಾತೆ ರಚಿ​ಸಿದ ದಿನಾಂಕ, ಬಳ​ಕೆ​ದಾ​ರರ ಮೊಬೈಲ್‌ ಸಂಖ್ಯೆ​ಯನ್ನು ಹ್ಯಾಕರ್‌ ಬಿಡು​ಗ​ಡೆ​ಗೊ​ಳಿ​ಸಿದೆ .

ಇಸ್ರೇ​ಲಿನ ಸೈಬ​ರ್‌​ಕ್ರೈಂ ಗುಪ್ತ​ಚರ ಕಂಪ​ನಿಯ ಸಹ ಸಂಸ್ಥಾ​ಪಕ ಹಡ್ಸನ್‌ ರಾಕ್‌, ಈ ಎಲ್ಲ ಮಾಹಿತಿ ಎಪಿಐ (ಅ​ಪ್ಲಿ​ಕೇ​ಶನ್‌ ಪ್ರೋಗ್ರಾ​ಮಿಂಗ್‌ ಇಂಟ​ರ್‌​ಫೇ​ಸ್‌​) (Application Programming Interface) ದೋಷ​ದಿಂದಾಗಿ ಸೋರಿ​ಕೆ​ಯಾ​ಗಿ​ರ​ಬ​ಹುದು ಎಂದು ಅಭಿ​ಪ್ರಾಯ ಪಟ್ಟಿ​ದ್ದಾರೆ.

‘ಟ್ವಿಟ್ಟರ್‌ ಅಥವಾ ಎಲಾನ್‌ ಮಸ್ಕ್‌ ನೀವಿ​ದನ್ನು ಓದು​ತ್ತಿ​ದ್ದರೆ ನೀವು ಈಗಾ​ಗಲೇ 54 ಲಕ್ಷ ಬಳ​ಕೆ​ದಾ​ರರ ಮಾಹಿತಿ ಸೋರಿ​ಕೆ​ಯಾ​ಗಿ​ದ್ದಕ್ಕೆ ಜಿಡಿ​ಪಿ​ಆರ್‌ ದಂಡದ ಭೀತಿ ಎದು​ರಿ​ಸು​ತ್ತಿ​ದ್ದೀರಿ. ಇನ್ನು 40 ಕೋಟಿ ಬಳ​ಕೆ​ದಾ​ರರ ಮಾಹಿತಿ ಸೋರಿಕೆ ಬಗ್ಗೆ ಆಲೋ​ಚಿ​ಸಿ’ ಎಂದು ಹ್ಯಾಕರ್‌ ಬೆದ​ರಿಕೆ ಒಡ್ಡಿ​ದ್ದಾ​ನೆ.

‘ ಫೇಸ್‌​ಬುಕ್‌ ಮಾಹಿತಿ ಸೋರಿಕೆ ಕಾರ​ಣ​ದಿಂದಾಗಿ 22 ಸಾವಿರ ಕೋಟಿ ರೂ. ಜಿಡಿ​ಪಿ​ಆರ್‌ ದಂಡ​ವನ್ನು ಪಾವ​ತಿ​ಸಿ​ದಂತೆ ನೀವು ಪಾವ​ತಿ​ಸಲು ಬಯ​ಸದೇ ಇದ್ದರೆ ಈ ಮಾಹಿ​ತಿ​ಯನ್ನು ನನ್ನಿಂದ ಖರೀ​ದಿಸಿ. ಬಳಿಕ ನಾನು ಈ ಮಾಹಿ​ತಿ​ಯನ್ನು ತೆಗೆದು ಹಾಕು​ತ್ತೇನೆ. ಇನ್ಯಾ​ರಿಗೂ ಮಾರಾಟ ಮಾಡು​ವು​ದಿ​ಲ್ಲ​’ ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಹಲ​ವಾರು ಖ್ಯಾತ ವ್ಯಕ್ತಿ​ಗಳು ಹಾಗೂ ರಾಜ​ಕಾ​ರ​ಣಿ​ಗಳು ಫಿಶಿಂಗ್‌, ಕ್ರಿಪ್ಟೋ ಸ್ಕಾಮ್‌, ಸಿಮ್‌ ಸ್ವ್ಯಾಪ್ಪಿಂಗ್‌, ಡಾಕ್ಸಿಂಗ್‌ ಮೊದ​ಲಾದ ಚಟು​ವ​ಟಿ​ಕೆ​ಗಳ ಮಾಹಿತಿ ಸೋರಿಕೆಯಾಗಿದ್ದು, ಜನರು ನಿಮ್ಮ ಕಂಪ​ನಿಯ ಮೇಲೆ ವಿಶ್ವಾಸ ಕಳೆ​ದು​ಕೊ​ಳ್ಳ​ಲಿ​ದ್ದಾರೆ. ಇದ​ರಿಂದ ನಿಮ್ಮ ಕಂಪ​ನಿಯ ಪ್ರಗತಿ ಕುಂಠಿ​ತ​ವಾ​ಗ​ಲಿದೆ ಎಂದು ಎಚ್ಚ​ರಿಕೆ ನೀಡಿ​ದ್ದಾ​ನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!