ಪ್ಯಾರಾಗ್ಲೈಡಿಂಗ್ ಮೇಲಿಂದ ಬಿದ್ದು ಮತ್ತೋರ್ವ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಾಗ್ಲೈಡಿಂಗ್ ವೇಳೆ ಗುಜರಾತ್‌ನಲ್ಲಿ 50 ಅಡಿ ಆಳದಿಂದ ಬಿದ್ದು ನಿನ್ನೆಯಷ್ಟೇ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅದೇ ದಿನ ಮತ್ತೊಂದು ಪ್ಯಾರಾ ಗ್ಲೈಡಿಂಗ್ ಅನಾಹುತ ನಡೆದಿದ್ದು,ಈ ದುರಂತದಲ್ಲಿಯೂ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದ ಕುಲು ಮನಾಲಿಯಲ್ಲಿ ಪ್ಯಾರಾ ಗ್ಲೈಡಿಂಗ್ ವೇಳೆ ಮಹಾರಾಷ್ಟ್ರದ 30 ವರ್ಷದ ಪ್ರವಾಸಿಗರೊಬ್ಬರು ಕುಲು ಜಿಲ್ಲೆಯ ದೋಭಿ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ನೂರಾರು ಅಡ್ಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹಾರಾಟದ ಸಮಯದಲ್ಲಿ ಪ್ಯಾರಾಗ್ಲೈಡಿಂಗ್ ಮೇಲ್ಪದರ ವೈಫಲ್ಯದಿಂದಾಗಿ ನೂರಾರು ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದಾರೆ. ಇವರ ಪ್ಯಾರಾಗ್ಲೈಡರ್ ಪೈಲಟ್ ಸುರಕ್ಷಿತವಾಗಿದ್ದಾರೆ.
ಮೃತ ವ್ಯಕ್ತಿಯನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಶಿರ್ವಲ್ ಗ್ರಾಮದ ಸೂರಜ್ ಸಂಜಯ್ ಶಾ ಎಂದು ಗುರುತಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!