ನಟಿ ಸಾಯಿ ಪಲ್ಲವಿಗೆ ಬಿಗ್‌ ಶಾಕ್‌: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಸಾಯಿ ಪಲ್ಲವಿಗೆ ಬಿಗ್‌ ಶಾಕ್‌ ಎದುರಾಗಿದ್ದು, ನಟಿ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್‌ ನಿರಾಕರಿಸಿದೆ.
ವಿರಾಟಪರ್ವಂ ಚಿತ್ರದ ಪ್ರಚಾರದ ವೇಳೆ ಸಾಯಿ ಪಲ್ಲವಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಬಜರಂಗದಳದ ಮುಖಂಡರು ನಟಿಯ ವಿರುದ್ಧ ದೂರು ನೀಡಿದ್ದು, ಕಾನೂನು ಸಲಹೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಆದ್ರೆ, ಇವುಗಳನ್ನ ರದ್ದುಗೊಳಿಸುವಂತೆ ಕೋರಿ ಸಾಯಿ ಪಲ್ಲವಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದ್ರೆ,ಸದ್ಯ ನಟಿಯ ಅರ್ಜಿಯನ್ನ ವಜಾಗೊಳಿಸಿರುವ ನ್ಯಾಯಾಲಯ, ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!