ವಾರಾಣಸಿಯಲ್ಲಿ ಮಕ್ಕಳೊಂದಿಗೆ ಮಗುವಾಗಿ ಆಡಿ, ಹಾಡಿ ಕುಣಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯ ಅಕ್ಷಯ ಪಾತ್ರಕ್ಕೆ ಭೇಟಿ ನೀಡಿ ಅಡುಗೆ ಕೋಣೆ ಉದ್ಘಾಟಿಸಿ, ಅಲ್ಲಿನ ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಪುಟ್ಟ ಮಕ್ಕಳ ಪ್ರತಿಭೆ ಕಂಡು ಬೆರಗಾದ ಪ್ರಧಾನಿ ನರೇಂದ್ರ ಮೋದಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳೊಂದಿಗೆ ಸೇರಿ ಮಗುವಾದ ಮೋದಿ, ಅವ್ರೊಂದಿಗೆ ಹಲವು ವಿಚಾರಗಳನ್ನ ಆಸಕ್ತಿ ಆಲಿಸಿದರು.ಮಕ್ಕಳು ಅಷ್ಟೇ ಪ್ರಧಾನಿ ಬಳಿ ಪ್ರೀತಿಯಿಂದ ನಿಂತು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕೆಲವರು ಶಿವ ತಾಂಡವ ಸ್ತೋತ್ರ ಪಠಿಸಿದರೆ, ಇನ್ನು ಕೆಲವರು ಕವನ ವಾಚಿಸಿ ತಮ್ಮ ಪ್ರತಿಭೆ ಮೆರೆದರು. ಇನ್ನು ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಅಕ್ಷರಶಃ ಶಿಕ್ಷರಂತೆಯೇ ಕಂಡಿರಬೇಕು.. ಯಾಕಂದ್ರೆ, ಏನಾದರೂ ಕೇಳಿದರೆ ಸಾಕು ಹೌದು ಸರ್ ಎನ್ನುತ್ತಿದ್ದರು.
ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಮಕ್ಕಳಿಗೆ ನಿಮಗೆ ತಿಳಿದಿರುವ ಅತ್ಯುತ್ತಮ ಯೋಗಾಸನವನ್ನ ಮಾಡಿ ಎಂದು ಹೇಳಿದರು. ಆಗ ಮಗುವೊಂದು ಯೋಗ ಪ್ರದರ್ಶಿಸಿತು. ಇದಲ್ಲದೆ, ವಿದ್ಯಾರ್ಥಿಯೊಬ್ಬರು ಡ್ರಮ್ ನುಡಿಸಿದ್ದು, ಪ್ರಧಾನಿ ಮೋದಿ ಟ್ಯೂನ್‌ನಲ್ಲಿ ತಲ್ಲೀನರಾಗಿ ಕಾಣಿಸಿಕೊಂಡರು. ನಂತ್ರ ಮಗುವಿನ ಭುಜದ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದರು.
ಮಕ್ಕಳ ಪ್ರತಿಭೆಯನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಕೂಡ ಅಚ್ಚರಿ ವ್ಯಕ್ತಪಡಿಸಿದ್ದು, ಈ ಪ್ರತಿಭಾವಂತ ಮಕ್ಕಳ ಶಿಕ್ಷಕರನ್ನ ಭೇಟಿಯಾಗಲು ನಾನು ಬಯಸುತ್ತೇನೆ ಎಂದು ಹೇಳಿದರು.

ಈ ಅವಧಿಯಲ್ಲಿ ಹೆಣ್ಣು ಮಗುವೊಂದು ಸ್ವಚ್ಛ ಭಾರತ ಅಭಿಯಾನದ ಕುರಿತು ಕವಿತೆಯನ್ನೂ ವಾಚಿಸಿದೆ. ಈ ವೇಳೆ ಪ್ರಧಾನಿ ಮೋದಿ ಅವರು ಮಕ್ಕಳಿಗೆ ನೀವು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತೀರಾ, ವ್ಯಾಯಾಮ ಮಾಡುತ್ತೀರಾ? ಅಂತಾ ಪ್ರಶ್ನಿಸಿದರು. ಇದಕ್ಕೆ ಮಕ್ಕಳು ಹೌದು ಸಾರ್ ಎಂದು ಹೇಳಿದ್ದು, ಮಕ್ಕಳ ಜೊತೆ ಮೋದಿ ಮಾತು ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!