ಹೊಸದಿಗಂತ ಡಿಜಿಟಲ್ ಡೆಸ್ಕ್:
IPL ಸೀಸನ್-18 ರಿಂದ ಹ್ಯಾರಿ ಬ್ರೂಕ್ ಹಿಂದೆ ಸರಿದಿದ್ದಾರೆ. ಬ್ರೂಕ್ ಈ ಬಾರಿಯ ಐಪಿಎಲ್ಗೆ ಅಲಭ್ಯರಾಗುವುದಾಗಿ ತಿಳಿಸಿದ್ದಾರೆ.
ಹ್ಯಾರಿ ಬ್ರೂಕ್ ಈ ನಿರ್ಧಾರವೇ ಇದೀಗ ಅವರಿಗೆ ಮುಳುವಾಗಲಿದೆ. IPL ಹೊಸ ನಿಯಮದ ಪ್ರಕಾರ, ಮೆಗಾ ಹರಾಜಿನ ಮೂಲಕ ಆಯ್ಕೆಯಾದ ಆಟಗಾರರು ಟೂರ್ನಿಯಿಂದ ಹಿಂದೆ ಸರಿದರೆ ಆಟಗಾರರ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ.
ಇದೀಗ ಟೂರ್ನಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಬ್ರೂಕ್ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಅದರಂತೆ ಐಪಿಎಲ್ 2026 ಮತ್ತು 2027 ರ ಹರಾಜಿಗೆ ಇಂಗ್ಲೆಂಡ್ ಆಟಗಾರನನ್ನು ಪರಿಣಿಸಲಾಗುವುದಿಲ್ಲ ಎಂದು ತಿಳಿದು ಬಂದಿದೆ.