ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಲು ಮುಂದಾಗಿದ್ದಾರಾ? ಹೀಗೊಂದು ಅನುಮಾನ ಹುಟ್ಟಿದೆ. ಇದಕ್ಕೆ ಕೊಹ್ಲಿ ನಡೆಯೇ ಕಾರಣವಾಗಿದೆ..
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ರಜೆ ಪಡೆದುಕೊಂಡ ವಿರಾಟ್ ಕೊಹ್ಲಿ ನೇರವಾಗಿ ಲಂಡನ್ಗೆ ಹಾರಿದ್ರು. ಅದಕ್ಕೂ ಮುನ್ನವೇ ಅನುಷ್ಕಾ ಶರ್ಮಾ ಲಂಡನ್ನಲ್ಲಿ ಬೀಡು ಬಿಟ್ಟಿದ್ರು. ಅನುಷ್ಕಾ ಮಗ ಅಕಾಯ್ ಜನ್ಮ ನೀಡಿದ್ದೂ ಕೂಡ ಅಲ್ಲೇ..
ಅಕಾಯ್ ಹುಟ್ಟಿನ ಬಳಿಕವೂ ಕೆಲ ತಿಂಗಳು ವಿರುಷ್ಕಾ ಜೋಡಿ ಅಲ್ಲೇ ವಾಸವಾಗಿತ್ತು. ಆಮೇಲೆ ಐಪಿಎಲ್ ವೇಳೆ ಕೊಹ್ಲಿ ಭಾರತಕ್ಕೆ ಆಗಮಿಸಿದ್ರೆ, ನಂತರದಲ್ಲಿ ಭಾರತಕ್ಕೆ ಬಂದಿದ್ದ ಅನುಷ್ಕಾ ಮತ್ತೆ ವಾಪಸ್ ಲಂಡನ್ಗೆ ತೆರಳಿದ್ರು. ಹೀಗಾಗಿ ಈ ಜೋಡಿ ಅಲ್ಲೇ ಸೆಟಲ್ ಆಗೋ ಯೋಚ್ನೆ ಮಾಡಿದ್ಯಾ ಅನ್ನೋದು ಅಭಿಮಾನಿಗಳ ಊಹೆಯಾಗಿದೆ.